ಕೃಷಿ ಸವಲತ್ತು ಮಾಹಿತಿ ಕಾರ್ಯಾಗಾರ
Update: 2016-01-19 23:52 IST
ಪುತ್ತೂರು, ಜ.19: ಸಂಘಟನೆಗಳು ಧನ ಸಂಗ್ರಹದ ಕುರಿತು ಚಿಂತಿಸದೆ ಜನರ ಮನ ಅರಿತುಕೊಳ್ಳಬೇಕು. ಹಾಗಾದಲ್ಲಿ ಜನ-ಮನ-ಧನ ಜತೆ ಸೇರಿ ಸಂಘಟನೆ ಸದೃಢವಾಗುತ್ತದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು. ಸುಳ್ಯ ತಾಲೂಕಿನ ಮುಕ್ಕೂರು ಶಾಲಾ ಸಭಾಂಗಣದಲ್ಲಿ ಕುಂಡಡ್ಕ ನೇಸರ ಯುವಕ ಮಂಡಲ ಉದ್ಘಾಟನೆ ಮತ್ತು ಕೃಷಿ ಸವಲತ್ತು ಮಾಹಿತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.