ಉರುಮಾಲ್ ವತಿಯಿಂದ ಸಾಮೂಹಿಕ ವಿವಾಹ
ಮಂಗಳಪೇಟೆ, ಜ.19: ಉರುಮಾಲ್ ಮಾಸಿಕದ ದಶವಾರ್ಷಿಕ ಸಂಭ್ರಮದ ಸಮಾರೋಪ ಸಮಾರಂಭದ ಪ್ರಯುಕ್ತ ಇತ್ತೀಚೆಗೆ ಮಂಗಳಪೇಟೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಮುಹಿಯುದ್ದೀನ್ ಜುಮಾ ಮಸ್ಜಿದ್‌ನ ಖತೀಬ್ ಬಿ.ಕೆ. ಅಲಿ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುಆ ಮಾಡಿದರು.
ಪತ್ರಿಕೆಯ ನಿರ್ದೇಶಕ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ನಿಖಾಹ್‌ನ ನೇತೃತ್ವ ವಹಿಸಿದ್ದರು. ಬಾಳ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎ. ಹಸನಬ್ಬ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶಾಸಕ ಬಿ.ಎ ಮೊಯ್ದಿನ್‌ಬಾವಾ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ತೆಕ್ಕಿಲ್ ಫೌಂಡೇಶನ್ ಅಧ್ಯಕ್ಷ ಟಿ.ಎಂ. ಶಹೀದ್, ಬಾಳ ಗ್ರಾಪಂ ಅಧ್ಯಕ್ಷ ಬಿ. ಆದಂ, ನಾರ್ಲಪದವು ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಎ.ಎಚ್. ನೌಷಾದ್ ಸೂರಲ್ಪಾಡಿ, ರಾಜಾರಾಮ್ ಸಾಲ್ಯಾನ್, ಅಬ್ದುಲ್ ಸತ್ತಾರ್, ಮುಹಮ್ಮದ್ ಹಾಜಿ, ಬೈಕಂಪಾಡಿ ಜಮಾಅತಿನ ಅಧ್ಯಕ್ಷ ಬಿ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಹಬೀಬ್ ಕಾಟಿಪಳ್ಳ, ಎಂ.ಎ ಶರೀಫ್ ಮಂಗಳಪೇಟೆ, ಅನ್ವರ್ ಹುಸೈನ್ ಭಾಗವಹಿಸಿದ್ದರು.
ಪತ್ರಿಕೆಯ ಪ್ರಕಾಶಕ ಎಂ. ಸರ್ಫ್‌ರಾಝ್ ನವಾಝ್ ಸ್ವಾಗತಿಸಿದರು. ಸಹ ಸಂಪಾದಕ ಐ.ಕೆ ಇಕ್ಬಾಲ್ ಮದನಿ ಕೊಟ್ಟು ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.