×
Ad

ಪ್ಯಾರಿಸ್ ದಾಳಿ ಬೆಲ್ಜಿಯಂ ವ್ಯಕ್ತಿ ಬಂಧನ

Update: 2016-01-20 00:06 IST

ರಬತ್, ಜ. 19: ಪ್ಯಾರಿಸ್‌ನಲ್ಲಿ ನವೆಂಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದಿನ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾದ ಮೊರೊಕ್ಕೊ ಮೂಲದ ಬೆಲ್ಜಿಯಂ ಪ್ರಜೆಯೊಬ್ಬನನ್ನು ಬಂಧಿಸಿರುವುದಾಗಿ ಮೊರೊಕ್ಕೊ ಸೋಮವಾರ ಹೇಳಿದೆ.
ಕಾಸಾಬ್ಲಾಂಕ ಸಮೀಪದ ಅಲ್-ಮುಹಮ್ಮದಿಯ ಪಟ್ಟಣದಲ್ಲಿ ಶುಕ್ರವಾರ ಬಂಧನಕ್ಕೊಳಗಾಗಿರುವ ಶಂಕಿತ ಸಿರಿಯಕ್ಕೆ ಹೋಗಿದ್ದ ಹಾಗೂ ಅಲ್ಲಿ ಐಸಿಸ್‌ಗೆ ಸೇರ್ಪಡೆಗೊಂಡಿದ್ದ ಎಂದು ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News