×
Ad

ಔಷಧಗಳ ಪ್ರಯೋಗ ನಿಲ್ಲಿಸುವುದಿಲ್ಲ: ಫ್ರಾನ್ಸ್

Update: 2016-01-20 00:07 IST

ಪ್ಯಾರಿಸ್, ಜ. 19: ಹೊಸ ಔಷಧವೊಂದರ ಪ್ರಯೋಗದ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಹೊರತಾಗಿಯೂ, ಫ್ರಾನ್ಸ್‌ನಲ್ಲಿ ಔಷಧಗಳ ವೈದ್ಯಕೀಯ ಪ್ರಯೋಗಗಳನ್ನು ನಿಲ್ಲಿಸಲು ಯಾವುದೇ ಕಾರಣವಿಲ್ಲ ಎಂದು ದೇಶದ ಆರೋಗ್ಯ ಸಚಿವೆ ಮ್ಯಾರಿಸಲ್ ಟೂರೈನ್ ಹೇಳಿದ್ದಾರೆ.
‘‘ಫ್ರಾನ್ಸ್‌ನಲ್ಲಿ ಹಿಂದೆಂದೂ ಕಾಣದ ದೊಡ್ಡ ಸಮಸ್ಯೆಯಿದೆ. ಆದರೆ, ವೈದ್ಯಕೀಯ ಪ್ರಯೋಗಗಳನ್ನು ನಿಲ್ಲಿಸುವುದನ್ನು ಸಮರ್ಥಿಸಲಾಗದು’’ ಎಂದು ರೇಡಿಯೊವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
ನೂತನ ಔಷಧಿಯೊಂದರ ಪ್ರಾಯೋಗಿಕ ಪರೀಕ್ಷೆಯ ಮೊದಲ ಹಂತದಲ್ಲಿ ಭಾಗವಹಿಸಿದ್ದ ಆರು ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ. ಅವರ ಪೈಕಿ ಓರ್ವ ಬಳಿಕ ಮೃತಪಟ್ಟಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News