ಸ್ನೇಹಾಲಯ ಮತ್ತು ಹಾಜಬ್ಬರ ಶಾಲೆಗೆ ಆಟೊ ರಾಜಾ ಭೇಟಿ
ಮಂಗಳೂರು, ಜ.19: ಮಾನಸಿಕ ಅಸ್ವಸ್ಥರಿಗೆ ಆಶ್ರಯ ಕೇಂದ್ರವಾದ ಬೆಂಗಳೂರಿನ ಹೋಮ್ ಆಫ್ ಹೋಪ್ಸ್‌ನ ಸ್ಥಾಪಕ ಟಿ ರಾಜಾ ಯಾನೆ ಆಟೊ ರಾಜಾ ‘ಸ್ನೇಹಾಲಯ’ ಮತ್ತು ‘ಹಾಜಬ್ಬರ ಶಾಲೆ’ಗೆ ಭೇಟಿ ನೀಡಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವದ ಅಂಗವಾಗಿ ನಡೆದ ರಿಯಲ್ ಹೀರೋಗಳೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಟ್ಯಾಲೆಂಟ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪಡೆಯಲು ಮಂಗಳೂರಿಗೆ ಆಗಮಿಸಿದ ಟಿ. ರಾಜಾ ಕೇರಳದ ಬಾಚಳಿಕೆ ಪಾವೂರುನಲ್ಲಿರುವ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ‘ಸ್ನೇಹಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಸಂಸ್ಥೆಯ ಸ್ಥಾಪಕ ಜೋಸೆಫ್ ಕ್ರಾಸ್ತಾ ಮತ್ತು ಸಿಬಂದಿ ಉಪಸ್ಥಿತರಿದ್ದರು.
ಅಕ್ಷರ ಸಂತ ಹರೇಕಳ ಹಾಜಬ್ಬರ ಶಾಲೆಗೆ ಭೇಟಿ ನೀಡಿದ ಟಿ. ರಾಜಾ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ತನ್ನ ಬದುಕಿನಲ್ಲಾದ ಪರಿವರ್ತನೆ ಮತ್ತು ಸೇವಾ ಚಟುವಟಿಕೆಗಳನ್ನು ವಿವರಿಸಿದರು. ಹರೇಕಳ ಹಾಜಬ್ಬ, ಟಿ.ರಾಜಾರನ್ನು ಸ್ವಾಗತಿಸಿದರು.ರಾಜಾರೊಂದಿಗೆ ಟ್ಯಾಲೆಂಟ್‌ನ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ರಫೀಕ್ ಮಾಸ್ಟರ್, ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು, ಉದ್ಯಮಿ ಅಬ್ದುಲ್ ಲತೀಫ್ ಬೆಳುವಾಯಿ ಉಪಸ್ಥಿತರಿದ್ದರು.