×
Ad

ಇಂದು ಲ್ಯಾಂಡ್‌ಲಿಂಕ್ಸ್‌ನ ‘ಆ್ಯಸ್ಟರ್ ಪಾರ್ಕ್’ ಉದ್ಘಾಟನೆ

Update: 2016-01-20 00:11 IST

ಮಂಗಳೂರು, ಜ.19: ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ 35ನೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆ್ಯಸ್ಟರ್ ಪಾರ್ಕ್ ಎಂಬ ಪ್ರೀಮಿಯಂ ಅಪಾರ್ಟ್ ಮೆಂಟ್‌ನ ಉದ್ಘಾಟನೆ ಬಿಜೈನಲ್ಲಿ ಜ.20 ರಂದು ಸಂಜೆ 6:30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಪಿಕಾಡ್ ವಾರ್ಡ್‌ನ ನಗರಪಾಲಿಕೆ ಸದಸ್ಯ ರಜನೀಶ್, ಮಾಧವ ಸುವರ್ಣ, ಕೆ.ಎಂ.ಶೆಟ್ಟಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಲ್ಯಾಂಡ್‌ಲಿಂಕ್ಸ್ ಕರಾವಳಿ ಕರ್ನಾಟಕದ ಸುಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪೆನಿಯಾಗಿದ್ದು, 35 ವರ್ಷಗಳಿಂದ ವ್ಯವಹಾರದಲ್ಲಿ ನಿರತವಾಗಿದೆ. ಲ್ಯಾಂಡ್‌ಲಿಂಕ್ಸ್ ಸಂಸ್ಥೆಯು 1981ರಲ್ಲಿ ಜೆ.ಕೃಷ್ಣ ಪಾಲೆಮಾರ್‌ರಿಂದ ಪ್ರಾರಂಭಗೊಂಡು ಮಂಗಳೂರಿನ ಜನರ ಪ್ರೀತಿ ವಿಶ್ವಾಸ ಗಳಿಸಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣದಲ್ಲಿ ಅಪಾರ ಕೀರ್ತಿ ಸಂಪಾದಿಸಿದೆ.

ಸಂಸ್ಥೆಯು ಸಮೂಹದ ಎಲ್ಲಾ ವರ್ಗಗಳಿಗೂ ಆವಶ್ಯಕವಾಗಿರುವಂತಹ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ನಿರ್ಮಾಣಕ್ಕೆ ಬದ್ಧವಾಗಿದೆ. ವಸತಿಯುತ ಲೇಔಟ್, ವಾಣಿಜ್ಯ ಸಂಕೀರ್ಣ, ಕೈಗಾರಿಕಾ ವಲಯಗಳ ಪಾರ್ಮ್ ಹೌಸ್, ಟೌನ್‌ಶಿಪ್‌ಗಳ ನಿರ್ಮಾಣದಲ್ಲಿ ಲ್ಯಾಂಡ್ ಲಿಂಕ್ಸ್ ಮುಂಚೂಣಿಯಲ್ಲಿದೆ.

 ಆ್ಯಸ್ಟರ್ ಪಾರ್ಕ್‌ನ ನಿರ್ಮಾಣ ಕಾರ್ಯ 2011ರಲ್ಲಿ 30 ಸೆಂಟ್ಸ್ ವಿಸ್ತೀರ್ಣದಲ್ಲಿ ಪ್ರಾರಂಭಿಸಲಾಗಿದ್ದು, 2 ಹಾಗೂ 3 ಬೆಡ್‌ರೂಂಗಳ ಫ್ಲ್ಯಾಟ್‌ಗಳನ್ನು ಹೊಂದಿದೆ. ಸ್ವಯಂಚಾಲಿತ ಲಿಫ್ಟ್, ಜನರೇಟರ್, ಪೈಪ್‌ಗಳ ಮೂಲಕ ಗ್ಯಾಸ್ ಸರಬರಾಜು, ಉದ್ಯಾನ, ಸೊಸೈಟಿ ಕೊಠಡಿ ಇತ್ಯಾದಿ ಅನುಕೂಲತೆಗಳನ್ನು ಒಳಗೊಂಡಿದೆ.

ನಗರದ ಕೇಂದ್ರ ಭಾಗದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 66, ಇತರ ಭಾಗಗಳಿಂದ ರಸ್ತೆ ಸಂಪರ್ಕಕ್ಕೆ ಹೊಂದಿಕೊಂಡಿವೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಬಿಗ್ ಬಝಾರ್ ಮತ್ತು ಮಾರ್ಕೆಟ್‌ಗಳಿಗೆ ಸಮೀಪದಲ್ಲಿದೆ. ಎಲ್ಲಾ ವರ್ಗಗಳಿಗೂ ಕೈಗೆಟಕುವ ಬೆಲೆಯನ್ನು ನಿಗದಿಮಾಡಿದ್ದು, ಸುರಕ್ಷಿತ ಜಾಗದಲ್ಲಿ ಸ್ವಂತ ಮನೆಯ ಕನಸನ್ನು ನನಸಾಗಿಸಬಹುದಾಗಿದೆ. ಪ್ರಮುಖ ಬ್ಯಾಂಕ್‌ಗಳು ಹಾಗೂ ಎಲ್‌ಐಸಿ ಹೌಸಿಂಗ್‌ನಿಂದ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News