ಚುನಾವಣೆ ಬಹಿಷ್ಕಾರಕ್ಕೆ ಬಬ್ಬರ್ಯಗುಡ್ಡೆ ಗ್ರಾಮಸ್ಥರ ನಿರ್ಧಾರ
Update: 2016-01-20 00:16 IST
ಉಡುಪಿ, ಜ.19: ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈವರೆಗೆ ರಸ್ತೆಯನ್ನು ದುರಸ್ತಿಗೊಳಿಸದಿರುವುದನ್ನು ಖಂಡಿಸಿ ಕಡೆಕಾರ್ ಗ್ರಾಪಂ ವ್ಯಾಪ್ತಿಯ ಬಬ್ಬರ್ಯಗುಡ್ಡೆಯ ನಾಗರಿಕರು ಜಿಪಂ ಹಾಗೂ ತಾಪಂ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಸೀತಾಬಾರ್, ಬಬ್ಬರ್ಯಗುಡ್ಡೆ ಮತ್ತು ಆಶ್ರಮ ಸಸಿತೋಟ ರಸ್ತೆಗಳ ದುರಸ್ತಿಗಾಗಿ ಕಡೆಕಾರ್ ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಈವರೆಗೆ ರಸ್ತೆ ದುರಸ್ತಿಗೆ ಯಾವುದೇ ಕ್ರಮ ಜರಗಿಸಿಲ್ಲ. ಗ್ರಾಪಂ ನಿಷ್ಕ್ರಿಯತೆಯಿಂದ ರೋಸಿ ಈ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.