ಕಿಂಡಿ ಅಣೆಕಟ್ಟು ಕಾಮಗಾರಿಗೆ ಸಚಿವ ಜೈನ್ ಚಾಲನೆ
Update: 2016-01-20 00:17 IST
ಮೂಡುಬಿದಿರೆ, ಜ.19: ಸಣ್ಣ ನೀರಾವರಿ ಇಲಾಖೆಯ ಯೋಜನೆಯಡಿ ಮಾರೂರು ಗ್ರಾಮದ ಪಂಜಿಬೆಟ್ಟು ಎಂಬಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಿಂಡಿ ಅಣೆಕಟ್ಟು ಕಾಮಗಾರಿಗೆ ಸಚಿವ ಕೆ.ಅಭಯಚಂದ್ರ ಜೈನ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಿಂಡಿ ಅಣೆಕಟ್ಟು ಅಭಿವೃದ್ಧಿಗೆ ಸರಕಾರ 5 ಕೋಟಿ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು. ಪುರಸಬಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮಂಗಳೂರು ಎಪಿಎಂಸಿ ಸದಸ್ಯ ಜೊಸ್ಸಿ ಮೆನೇಜಸ್, ಪುರಸಭಾ ಸದಸ್ಯರಾದ ಹರಿಣಾಕ್ಷಿ ಸುವರ್ಣ, ಪಿ.ಕೆ ಥೋಮಸ್, ರತ್ನಾಕರ ದೇವಾಡಿಗ, ರಮಣಿ, ಎಲಿಜಾ ಮೆನೇಜಸ್, ವನಿತಾ, ಮಾಜಿ ಸದಸ್ಯೆ ಮೇರಿ ಪಿರೇರಾ, ಸಣ್ಣ ನೀರಾವರಿ ಇಲಾಖೆಯ ಎಡಬ್ಲ್ಯು ಷಣ್ಮುಗಂ, ಜೂನಿಯರ್ ಎಂಜಿನಿಯರ್ ರಾಕೇಶ್ ಉಪಸ್ಥಿತರಿದ್ದರು.