ಫೆ.1ರಿಂದ ಹೆಲ್ಮೆಟ್ ಕಡ್ಡಾಯ
Update: 2016-01-20 00:18 IST
ಪುತ್ತೂರು, ಜ.19: ಸರಕಾರ ಅಧಿಸೂಚನೆ ಕರ್ನಾಟಕ ಮೋಟಾರು ವಾಹನ ನಿಯಮದಂತೆ ಫೆೆ.1ರಿಂದ ಬೈಕ್ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸುವಂತೆ ಆದೇಶ ನೀಡಿರುವ ಕುರಿತು ಪುತ್ತೂರು ಸಂಚಾರಿ ಠಾಣೆಗೆ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯಿಂದ ಆದೇಶ ಬಂದಿದೆ.
ಕರ್ನಾಟಕ ಮೋಟಾರ್ ವಾಹನ ನಿಯಮ 1989, ನಿಯಮ 230, ಉಪನಿಯಮ 1ರ ಅನ್ವಯ ಹೆಲ್ಮೆಟ್ ಧರಿಸುವುನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗಿತ್ತು. ಇದೀಗ ಫೆ.1ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಬಂದ ಆದೇಶದಂತೆ ಪುತ್ತೂರು ನಗರ ಸಂಚಾರಿ ಠಾಣೆಯ ಎಸ್ಸೈನಾಗರಾಜ್ ತಿಳಿಸಿದ್ದಾರೆ.