ನಾಲ್ಕನೆ ಏಕದಿನ: ರಿಚರ್ಡ್ಸನ್‌ ಪ್ರಹಾರ, ಭಾರತದ ಕೈ ಜಾರಿದ ಗೆಲುವು

Update: 2016-01-20 18:50 GMT

ಕ್ಯಾನ್ಬೆರಾ , ಜ.20:ಇಲ್ಲಿ ನಡೆದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮಧ್ಯಮ ಸರದಿಯ ದಾಂಡಿಗರ ವೈಫಲ್ಯದಿಂದಾಗಿ ಗೆಲುವಿನಂಚಿನಲ್ಲಿ ಎಡವಿದೆ.
  ಮನುಕಾ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆಲುವಿನ ಸಮೀಪ ತಲುಪಿದ್ದರೂ ಆಸ್ಟ್ರೇಲಿಯದ ಯುವ ಮಧ್ಯಮ ವೇಗಿ ಕೇನೆ ವಿಲಿಯಮ್ಸ್ ರಿಚರ್ಡ್ಸನ್68ಕ್ಕೆ ಐದು ವಿಕೆಟ್ ಉಡಾಯಿಸುವ ಮೂಲಕ ಭಾರತಕ್ಕೆ ಗೆಲುವು ನಿರಾಕರಿಸಿದರು.
   ಗೆಲುವಿಗೆ 349 ರನ್‌ಗಳ ಕಠಿಣ ಸವಾಲನ್ನು ಪಡೆದ ಭಾರತ 49.2 ಓವರ್‌ಗಳಲ್ಲಿ 323 ರನ್‌ಗಳಿಗೆ ಆಲೌಟಾಗಿ 25 ರನ್ ಅಂತರದ ಸೋಲು ಅನುಭವಿಸಿತು. ಆರಂಭಿಕ ದಾಂಡಿಗ ಶಿಖರ್ ಧವನ್(126) , ಉಪ ನಾಯಕ ವಿರಾಟ್ ಕೊಹ್ಲಿ(106) ಮತ್ತು ರೋಹಿತ್ ಶರ್ಮ(41) ಉಪಯುಕ್ತ ಕೊಡುಗೆ ನೀಡಿದ್ದರೂ, ನಾಯಕ ಎಂಎಸ್ ಧೋನಿ ಸೇರಿದಂತೆ ತಂಡದ ಸಹ ಆಟಗಾರರು ಕಳಪೆ ಪ್ರದರ್ಶನ ನೀಡಿದ ಪರಿಣಾಮ ಭಾರತ ಗೆಲ್ಲುವ ಅವಕಾಶ ಕಳೆದುಕೊಂಡಿತು.
 ಕೊನೆಯ 4 ಓವರ್‌ಗಳಲ್ಲಿ ರಿಚರ್ಡ್ಸನ್‌ಭಾರತದ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದು, ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಚರ್ಡ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
       ಮೊದಲ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸಿದ್ದ ಆರಂಭಿಕ ದಾಂಡಿಗ ರೋಹಿತ್ ಶರ್ಮ 41 ರನ್ ಗಳಿಸಿ ರಿಚರ್ಡ್ಸನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ರೋಹಿತ್ ಶರ್ಮ ನಿರ್ಗಮನದ ಮೊದಲು ಆ ಓವರ್‌ನಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಒಳಗೊಂಡ 16 ರನ್ ಕಬಳಿಸಿದ್ದರು. ತಂಡದ ಸ್ಕೋರ್ 8 ಓವರ್‌ಗಳಲ್ಲಿ 65 ಆಗಿತ್ತು. ಎರಡನೆ ವಿಕೆಟ್‌ಗೆ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಜೊತೆಯಾಟದಲ್ಲಿ 212 ರನ್‌ಗಳ ಕೊಡುಗೆ ನೀಡಿ ಆಸ್ಟ್ರೇಲಿಯದ ಬೌಲರ್‌ಗಳ ಬೆವರಿಳಿಸಿದ್ದರು.
ಶಿಖರ್ ಧವನ್ 10ನೆ ಏಕದಿನ ಶತಕ ದಾಖಲಿಸಿದು. ಕೊಹ್ಲಿ 25ನೆ ಶತಕ ದಾಖಲಿಸಿ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸುವ ಪ್ರಯತ್ನ ನಡೆಸಿದರು.
 ಶಿಖರ್ ಧವನ್ 126 ರನ್(113ಎ, 14ಬೌ,2ಸಿ) ಮತ್ತು ವಿರಾಟ್ ಕೊಹ್ಲಿ 106 ರನ್(92ಎ, 11ಬೌ,1ಸಿ)ಗಳ ಕೊಡುಗೆ ನೀಡಿ ಆಸ್ಟ್ರೇಲಿಯದ ಬೌಲರ್‌ಗಳ ಬೆವರಿಳಿಸಿದ್ದರು.
  27.3 ಓವರ್‌ನಲ್ಲಿ ಧವನ್ ಹೇಸ್ಟಿಂಗ್ಸ್ ಎಸೆತವನ್ನು ಎದುರಿಸುವ ಪ್ರಯತ್ನದಲ್ಲಿ ಜಾರ್ಜ್ ಬೈಲಿಗೆ ಕ್ಯಾಚ್‌ಗೆ ನೀಡಿದರು. ಕ್ರೀಸ್‌ಗೆ ಆಗಮಿಸಿದ ನಾಯಕ ಧೋನಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಮತ್ತೆ ಭಾರತ ಚೇತರಿಸಿಕೊಳ್ಳಲಿಲ್ಲ. 40ನೆ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಪೆವಿಲಿಯನ್ ಸೇರುವುದರೊಂದಿಗೆ ಭಾರತ ಒತ್ತಡಕ್ಕೆ ಸಿಲುಕಿತು.
ಗುರುಕೀರತ್ ಸಿಂಗ್(5), ಅಜಿಂಕ್ಯ ರಹಾನೆ(2), ರಿಶಿ ಧವನ್(9), ಭುವನೇಶ್ವರ ಕುಮಾರ್(2), ಉಮೇಶ್ ಯಾದವ್ (2) , ಇಶಾಂತ್ ಶರ್ಮ(0) ಔಟಾದರು. ಭಾರತ ಕೇವಲ 15 ರನ್‌ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಆಲ್‌ರೌಂಡರ್ ರವೀಂದ್ರ ಜಡೇಜ (ಔಟಾಗದೆ 24) ಹೋರಾಟ ನಡೆಸಿದರೂ, ಅವರ ಪ್ರಯತ್ನ ಫಲ ನೀಡಲಿಲ್ಲ.
 ರಿಚರ್ಡ್ಸನ್ 68ಕ್ಕೆ 5, ಹೇಸ್ಟಿಂಗ್ಸ್ 50ಕ್ಕೆ 2 ಮತ್ತು ಮಿಚೆಲ್ ಮಾರ್ಷ್ 55ಕ್ಕೆ 2, ಲಿನ್ 76ಕ್ಕೆ 1 ವಿಕೆಟ್ ಕಬಳಿಸಿದರು.
   
ಫಿಂಚ್ -ವಾರ್ನರ್ ಶತಕದ ಜೊತೆಯಾಟ: ಇದಕ್ಕೂ ಮೊದಲು ಆಸ್ಟ್ರೇಲಿಯ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿತ್ತು. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 348 ರನ್ ಗಳಿಸಿತ್ತು. ಫಿಂಚ್ ಮತ್ತು ವಾರ್ನರ್ ಮೊದಲ ವಿಕೆಟ್‌ಗೆ 187 ರನ್‌ಗಳ ಕೊಡುಗೆ ನೀಡಿದ್ದರು. ವಾರ್ನರ್ 120 ನಿಮಿಷಗಳ ಬ್ಯಾಟಿಂಗ್‌ನಲ್ಲಿ 92 ಎಸೆತಗಳನ್ನು ಎದುರಿಸಿದರು. 12 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಲ್ಲಿ 93 ರನ್ ಗಳಿಸಿದರು.  ಇಶಾಂತ್ ಶರ್ಮ ಎಸೆತದಲ್ಲಿ ಬೌಲ್ಡ್ ಆಗಿ ವಾರ್ನರ್ ಪೆವಿಲಿಯನ್ ತಲುಪಿದರು.
 ಫಿಂಚ್(107) ಎಂಟನೆ ಶತಕ ದಾಖಲಿಸಿ ಔಟಾದರು. ಭಾರತದ ಉಮೇಶ್ ಯಾದವ್(3-67) ಮತ್ತು ಇಶಾಂತ್ ಶರ್ಮ(4-77) ದಾಳಿಯನ್ನು ಎದುರಿಸಿದ ಮಿಚೆಲ್ ಮಾರ್ಷ್ (33), ಸ್ಟೀವನ್ ಸ್ಮಿತ್(51), ಗ್ಲೆನ್ ಮ್ಯಾಕ್ಸ್‌ವೆಲ್(41) ಮತ್ತು ಜಾರ್ಜ್ ಬೈಲಿ 10 ರನ್ ಗಳಿಸಿ ತಂಡದ ಸ್ಕೋರ್‌ನ್ನು 348ಕ್ಕೆ ತಲುಪಿಸಲು ನೆರವಾದರು.

ಹಠಾತ್ ಕುಸಿದ ಭಾರತ

 ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದ ಗೆಲುವಿಗೆ 249 ರನ್ ಗುರಿ ಪಡೆದಿದ್ದ ಭಾರತ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ 2ನೆ ವಿಕೆಟ್ ಸೇರಿಸಿದ 212 ರನ್ ನೆರವಿನಿಂದ ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಏಳು ಪಂದ್ಯಗಳ ನಂತರ ಆಸೀಸ್ ವಿರುದ್ಧ ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, ಅದು ನಾಟಕೀಯ ಕುಸಿತ ಕಂಡಿತು.

   ವೇಗದ ಬೌಲರ್ ಕೇನ್ ರಿಚರ್ಡ್ಸನ್(5-68) ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಭಾರತ 46 ರನ್ ಗಳಿಸುವಷ್ಟರಲ್ಲಿ ಅಂತಿಮ 9 ವಿಕೆಟ್‌ಗಳನ್ನು ಕಳೆದುಕೊಂಡಿತು. 49.2 ಓವರ್‌ಗಳಲ್ಲಿ 323 ರನ್‌ಗೆ ಆಲೌಟಾಯಿತು.

ಸ್ಕೋರ್ ಪಟ್ಟಿ
 ಡೇವಿಡ್ ವಾರ್ನರ್ ಬಿ ಇಶಾಂತ್ 93
ಎ.ಫಿಂಚ್ ಸಿ ಇಶಾಂತ್ ಬಿ ಯಾದವ್107
ಮಿಚೆಲ್ ಮಾರ್ಷ್ ಸಿ ಕೊಹ್ಲಿ ಬಿ ಯಾದವ್ 33
 ಸ್ಟೀವನ್ ಸ್ಮಿತ್ ಸಿ ಗುರುಕೀರತ್ ಬಿ ಇಶಾಂತ್51
ಮ್ಯಾಕ್ಸ್‌ವೆಲ್ ಸಿ ಪಾಂಡೆ ಬಿ ಇಶಾಂತ್41
  ಜಾರ್ಜ್ ಬೈಲಿ ಸಿ ರೋಹಿತ್ ಬಿ ಇಶಾಂತ್ 10
   ಫಾಕ್ನರ್ ಬಿ ಯಾದವ್00
 ಮ್ಯಾಥ್ಯೂ ವೇಡ್ ರನೌಟ್(ರೋಹಿತ್/ಯಾದವ್)00
  ಹೇಸ್ಟೀಂಗ್ಸ್ ಔಟಾಗದೆ 00
  ಇತರೆ00
ವಿಕೆಟ್ ಪತನ: 1-187, 2-221, 3-288, 4-298, 5-319, 6-319, 7-321, 8-348.
ಬೌಲಿಂಗ್ ವಿವರ
ಉಮೇಶ್ ಯಾದವ್10-1-67-3
 ಭುವನೇಶ್ವರ ಕುಮಾರ್ 08-0-69-0
ಇಶಾಂತ್ ಶರ್ಮ10-0-77-4
    ಗುರುಕೀರತ್ ಸಿಂಗ್03-0-24-0
  ರಿಶಿ ಧವನ್ 09-0-53-0
  ರವೀಂದ್ರ ಜಡೇಜ 10-0-51-0
ಭಾರತ 49.2 ಓವರ್‌ಗಳಲ್ಲಿ ಆಲೌಟ್ 323
ರೋಹಿತ್ ಶರ್ಮ ಸಿ ವೇಡ್ ಬಿ ರಿಚರ್ಡ್ಸನ್ 41
ಶಿಖರ್ ಧವನ್ ಸಿ ಬೈಲಿ ಬಿ ಹೇಸ್ಟಿಂಗ್ಸ್ 126
  ವಿರಾಟ್ ಕೊಹ್ಲಿ ಸಿ ಸ್ಮಿತ್ ಬಿ ರಿಚರ್ಡ್ಸನ್106
 ಎಂಎಸ್ ಧೋನಿ ಸಿ ವೇಡ್ ಬಿ ಹೇಸ್ಟಿಂಗ್ಸ್ 00
ಗುರುಕೀರತ್ ಸಿಂಗ್ ಸಿ ಶೇನ್ ಮಾರ್ಷ್ ಬಿ ಲಿನ್ 05
  ರವಿಂದ್ರ ಜಡೇಜ ಔಟಾಗದೆ24
 ಅಜಿಂಕ್ಯ ರಹಾನೆ ಸಿ ಸ್ಮಿತ್ ಬಿ ರಿಚರ್ಡ್ಸನ್ 02
 ರಿಶಿ ಧವನ್ ಸಿ ವಾರ್ನರ್ ಬಿ ರಿಚರ್ಡ್ಸನ್09
 ಭುವನೇಶ್ವರ ಕುಮಾರ್ ಸಿ ಸ್ಮಿತ್ ಬಿ ರಿಚರ್ಡ್ಸನ್ 02
 ಉಮೇಶ್ ಯಾದವ್ ಸಿ ಬೈಲಿ ಬಿ ಮಾರ್ಷ್ 02
ಇಶಾಂತ್ ಶರ್ಮ ಸಿ ವೇಡ್ ಬಿ ಮಾರ್ಷ್ 00
    ಇತರೆ06
ವಿಕೆಟ್ ಪತನ: 1-65, 2-277, 3-277, 4-278, 5-286, 6-294, 7-308, 8-311, 9-315, 10-323
ಬೌಲಿಂಗ್ ವಿವರ
 ಲಿನ್10-0-76-1
 ರಿಚರ್ಡ್ಸನ್10-1-68-5
 ಹೇಸ್ಟಿಂಗ್ಸ್10-0-50-2
 ಫಾಕ್ನರ್07-0-48-0
 ಮಿಚೆಲ್ ಮಾರ್ಷ್ 9.2-0-55-2
  ಮ್ಯಾಕ್ಸ್‌ವೆಲ್01-0-10-0
 ಸ್ಟೀವ್ ಸ್ಮಿತ್02-0-16-0
ಪಂದ್ಯಶ್ರೇಷ್ಠ: ಕೇನ್‌  ರಿಚರ್ಡ್ಸನ್

        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News