ಕಾಸರಗೋಡು: ರಾಜ್ಯ ಮಟ್ಟದ ವಿಮೋಚನಾ ಯಾತ್ರೆ
Update: 2016-01-20 11:49 IST
ಕಾಸರಗೋಡು : ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ನೇತ್ರತ್ವದ ರಾಜ್ಯ ಮಟ್ಟದ ವಿಮೋಚನಾ ಯಾತ್ರೆ ಇಂದು ಬೆಳಿಗ್ಗೆ ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡಿದರು.
ಕೇಂದ್ರ ಸಚಿವ ಸದಾನಂದ ಗೌಡ, ಚಿತ್ರನಟ ಸುರೇಶ್ ಗೋಪಿ , ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಚ್ . ರಾಜಾ ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಉಪಸ್ಥಿತರಿದ್ದರು
ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಮೂಲಕ ಈ ಯಾತ್ರೆ ಹಾದುಹೋಗಲಿದ್ದು, ಫೆಬ್ರವರಿ10 ರಂದು ತಿರುವನಂತಪುರದಲ್ಲಿ ಸಮಾರೋಪ ಗೊಳ್ಳಲಿದೆ.