ಎರಡು ವರ್ಷಗಳ ಎಡೆಯಲ್ಲಿ ಇರಾಕ್ನಲ್ಲಿ 19,000 ನಾಗರಿಕರ ಹತ್ಯೆ
ಬಗ್ದಾದ್:ಎರಡು ದಶಕಗಳನ್ನು ಮೀರಿ ಮುಂದುವರಿಯುತ್ತಿರುವ ಇರಾಕ್ ಸಂಘರ್ಷದಲ್ಲಿ ಕಳೆದ ಎರಡು ವರ್ಷಗಳಲ್ಲಿ 19,000 ನಾಗರಿಕರು ಹತರಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ವಿಶ್ವಸಂಸ್ಥೆ ವರದಿ ಪ್ರಕಾರ2014 ಜನವರಿಯಿಂದ 2015 ಅಕ್ಟೋಬರ್ ವರೆಗೆ 18802 ನಾಗರಿಕರು ಸಾಯಿಸಲ್ಟಟ್ಟಿದ್ದಾರೆ. 36,245 ಮಂದಿ ಗಾಯಗೊಂಡಿದ್ದಾರೆ.ಐಎಸ್ ಭಯೋತ್ಪಾದಕರು ಗುಂಡಿಟ್ಟು ಸಾಯಿಸಿದ್ದು ಬೆಂಕಿಗೆ ಹಾಕಿ ಸುಟ್ಟು ಕೊಂದದ್ದು ಮತ್ತು ಬಿಲ್ಡಿಂಗ್ ಮೇಲಿಂದ ಕೆಳಕ್ಕೆ ದೂಡಿ ಹಾಕಿ ಕೊಂದುದರ ಮಾಹಿತಿ ವರದಿಯಲ್ಲಿ ವಿವರವಾಗಿ ಇದೆ. ದೇಶದಲ್ಲಿರುವ ಯಝೀದಿ ಅಲ್ಪಸಂಖ್ಯಾತರ ಮಹಿಳೆಯರು ಮಕ್ಕಳು ಸಹಿತ 3,500ರಷ್ಟು ಮಂದಿಯನ್ನು ಐಎಸ್ ಗುಲಾಮರಾಗಿರಿಸಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ 32ಲಕ್ಷ ಮಂದಿ ದೇಶವನ್ನು ಬಿಟ್ಟುಹೋಗಿದ್ದಾರೆ. ಹುಟ್ಟೂರಿನ ಪರಿಸ್ಥಿತಿ ತುಂಬ ವಿಷಮಗೊಂಡಾಗ ಇವರೆಲ್ಲ ಯುರೋಪ್ ಮುಂತಾದೆಡೆಗೆ ಸುರಕ್ಷಿತ ತಾಣವನ್ನು ಹುಡುಕಿ ವಲಸೆ ಹೋಗಿದ್ದಾರೆಂದು ವರದಿ ತಿಳಿಸಿದೆ. ವಿಶ್ವಸಂಸ್ಥೆ ಕೈಕೆಳಗಿನ ಇರಾಕ್ ಮಿಶನ್ ಮತ್ತು ಮಾನವ ಹಕ್ಕು ಹೈಕಮಿಶನ್ ಜಂಟಿಯಗಿ ಈ ವರದಿ ತಯಾರಿಸಿವೆ. 2006 ಮತ್ತು 2007ರ ಬಳಿಕ ಪುನಃ ನಾಗರಿಕರ ಸಾವು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.