ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ವಿಪಕ್ಷಗಳ ಕೀಳು ರಾಜಕೀಯ : ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಮಂಗಳೂರು,ಜ.20:ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ಮೆಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ವಿಪಕ್ಷಗಳು ಕೀಳುರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರೋಹಿತ್ ಆತ್ಮಹತ್ಯೆಗೆ ಮುನ್ನ ಬರೆದ ಪತ್ರದಲ್ಲಿ ಯಾರ ಮೇಲೂ ಆಪಾದನೆ ಮಾಡಿಲ್ಲ, ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೂ ವಿಪಕ್ಷಗಳು ವಿನಾಕಾರಣ ಕೇಂದ್ರ ಸಚಿವರಾದ ದತ್ತಾತ್ರೆಯ ಬಂಡಾರು, ಸ್ಮತಿ ಇರಾನಿಯವರ ಮೇಲೆ ಆಪಾದನೆ ಮಾಡುತ್ತಿದೆ. ಸತ್ಯ ಗೊತ್ತಿಲ್ಲದೆ ವಿಪಕ್ಷಗಳು ಟೀಕೆ ಮಾಡುತ್ತಿದೆ. ಯಾಕುಬ್ ಮೆಮನ್ ಗಲ್ಲಿಗೇರಿಸಿದ ವಿರೋಸಿ ಕ್ಯಾಂಪಸ್‌ನೊಳಗೆ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ರೋಹಿತ್ ಪಾಲ್ಗೊಂಡಿದ್ದ್ದ. ಈ ಹಿನ್ನೆಲೆಯಲ್ಲಿ ಅಲ್ಲಿ ನಡೆದ ಘರ್ಷಣೆಯಿಂದ ಎಬಿವಿಪಿ ಮುಖಂಡರ ಮೇಲೂ ಹಲ್ಲೆ ನಡೆದಿತ್ತು. ಈ ವಿವಾದಕ್ಕೆ ಸಮಬಂಸಿದಂತೆ ವಿಶ್ವವಿದ್ಯಾನಿಲಯ ಕ್ರಮಕೈಗೊಂಡಿದೆ ಎಂದು ಅವರು ಹೇಳಿದರು.
ಇದೇ ವಿಶ್ವವಿದ್ಯಾನಿಲಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತಾವಯಲ್ಲಿ 9 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇವರು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್‌ಗಾಂಯಾಗಲಿ, ಇತರ ಕಾಂಗ್ರೆಸ್ ನಾಯಕರಾಗಲಿ ಅಲ್ಲಿಗೆ ಭೇಟಿ ನೀಡಲಿಲ್ಲ . ಈಗ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ದೇಶದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು, ದಲಿತರು ಸುರಕ್ಷಿತವಾಗಿಲ್ಲ ಎಂಬ ಪ್ರಚಾರವನ್ನು ಮಾಡುವ ಮೂಲಕ ವಿಪಕ್ಷಗಳು ವೋಟಿನ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರಕಾರ 1ಡಿ( ಡೆವಲಪ್‌ಮೆಂಟ್) ತತ್ವದಲ್ಲಿ ಕಾರ್ಯತತ್ಪರವಾಗಿದ್ದರೆ, ಕಾಂಗ್ರೆಸ್ 4ಡಿ ತತ್ವದಲ್ಲಿ ಅಭಿವೃದ್ಧಿಪರ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದೆ . ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡು, ಅಡ್ಡಹಾಕು, ಹಾದಿ ತಪ್ಪಿಸು, ತಪ್ಪು ಮಾಹಿತಿ ರವಾನಿಸುವ(4ಡಿ- ಡಿಲೇ, ಡಿಸ್‌ರಪ್ಟ್, ಡೈವರ್ಟ್, ಡಿಸ್‌ಇನ್‌ಫಾರ್ಮ್) ಹುನ್ನಾರ ಹೂಡಿ ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ವರ್ಲ್ಡ್ ಬ್ಯಾಂಕ್, ಇಂಟರ್‌ನ್ಯಾಶನಲ್ ಮಾನಿಟರಿ ಫಂಡ್, ವರ್ಲ್ಡ್ ಎಕಾನಮಿ ಫಂಡ್ ಭಾರತದಲ್ಲಿ ಹೂಡಿಕೆಗೆ ಉತ್ತಮ ಅವಕಾಶ ಎಂಬುದಾಗಿ ಹೇಳಿದೆ ಎಂದು ಅವರು ತಿಳಿಸಿದರು.
ಯುಪಿಎ ಸರಕಾರವೇ ಮಂಡಿಸಿದ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಮಸೂದೆಯನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ಮಂಡಿಸಲು ಮುಂದಾದರೂ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಅವರು ತಿಳಿಸಿದರು.
ಜಿಎಸ್‌ಟಿ ಮಸೂದೆ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮುಖಂಡರಾದ ವೀರಪ್ಪ ಮೊಲಿ, ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಖುದ್ದಾಗಿ ಮಾತಾಡಿದರೂ ಮೂಲ ಪ್ರಸ್ತಾಪದಲ್ಲಿ ಇರದ ಟ್ಯಾಕ್ಸ್ ಕ್ಯಾಪ್‌ನ ಅಡ್ಡಿ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಯಶಸ್ಸು ಸಾಸಬಾರದು ಎಂಬ ನಿಟ್ಟಿನಲ್ಲಿ ಸುಖಾಸುಮ್ಮನೆ ಕಾಂಗ್ರೆಸ್ ತಗಾದೆ ಎತ್ತುವ ಮೂಲಕ ದೇಶದ ಅಭಿವೃದ್ಧಿಗೆ ಮಾರಕವಾಗಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಅವರು ಹೇಳಿದರು.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ.42 ಅಭಿವೃದ್ಧಿ, ಬೆಳೆಹಾನಿ ಪರಿಹಾರದಲ್ಲಿ ಏರಿಕೆ, ಪ್ರಾಕೃತಿಕ ವಿಕೋಪದಲ್ಲಿ ಮೃತರಾದವರಿಗೆ 4 ಲಕ್ಷ ರೂ. ಪರಿಹಾರ, ಮುದ್ರಾ ಯೋಜನೆಯ ಅನ್ವಯ 92 ಸಾವಿರ ಕೋಟಿ ರೂ. ವಿತರಣೆ ಮುಂತಾದ ಜನಪರ ಯೋಜನೆಯನ್ನು ಪ್ರಧಾನಿ ಹಮ್ಮಿಕೊಂಡಿದ್ದರೂ ಕಾಂಗ್ರೆಸ್ ವಿನಾ ಕಾರಣ ಟೀಕೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ರುಕ್ಮಯ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.