2015ರಲ್ಲಿ ಅನಿವಾಸಿಗಳು ಭಾರತಕ್ಕೆ ಕಳಿಸಿದ ಹಣವೆಷ್ಟು ಗೊತ್ತೇ ? !!
Update: 2016-01-20 14:05 IST
2015ರಲ್ಲಿ ಅತಿಹೆಚ್ಚು 4.75ಲಕ್ಷ ಕೋಟಿ ರೂ( 47,50,00,00,00,000) ಅನಿವಾಸಿಗಳು ಭಾರತಕ್ಕೆ ಕಳಿಸಿದ್ದಾರೆ !
ಅಮೆರಿಕ: ವರ್ಲ್ಡ್ ಬ್ಯಾಂಕ್ ವರದಿಪ್ರಕಾರ ಅತಿ ಹೆಚ್ಚು ಹಣವನ್ನು ಭಾರತಕ್ಕೆ ಕಳುಹಿಸಲಾಗಿದೆ 72 ಬಿಲಿಯನ್ ಯುಎಸ್ ಡಾಲರ್‌ನ್ನು ಭಾರತಕ್ಕೆ ಅನಿವಾಸಿ ಭಾರತಿಯರು ಕಳಿಸಿದ್ದಾರೆ. ಇದು ಪ್ರಸಕ್ತ ಸಾಲಿನಲ್ಲಿ ವಿದೇಶಗಳಿಂದ ಕರೆನ್ಸಿರೂಪದಲ್ಲಿ ತಾಯ್ನಿಡು ರಾಷ್ಟ್ರ ಸ್ವೀಕರಿಸಿದ ಗರಿಷ್ಠ ಮೊತ್ತವೆಂದು ವಿಶ್ವ ಬ್ಯಾಂಕ್ ಹೇಳುತ್ತಿದೆ.
ಎರಡನೇ ಅತಿಹೆಚ್ಚು ಹಣ ಸ್ವೀಕರಿಸಿದ ರಾಷ್ಟ್ರ ಚೀನವಾಗಿದೆ. ಅಲ್ಲಿಗೆ 64 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಆದೇಶದಿಂದ ವಿದೇಶಗಳಲ್ಲಿರುವವರು ಕಳಿಸಿದ್ದಾರೆ. ಹೀಗೆ ಭಾರಿ ಸಂಖ್ಯೆಯಲ್ಲಿ ಹಣ ಸ್ವೀಕರಿಸಿರುವ ರಾಷ್ಟ್ರಗಳಲ್ಲಿ ಫಿಲಿಪ್ಪಿನ್ಸ್ ಮೂರನೆ ಸ್ಥಾನದಲ್ಲಿದೆ.