×
Ad

ಮಡಂತ್ಯಾರು : ರಸ್ತೆ ಸುರಕ್ಷತಾ ಸಪ್ತಾಹ

Update: 2016-01-20 14:24 IST

ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣೆ ಮತ್ತು ಸೆಕ್ರೇಟ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ 27ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಪಿ.ಎಸ್.ಐ ಲತೇಶ್ ಕುಮಾರ್ ಡಿ.ಕೆ ಇವರ ನೇತೃತ್ವದಲ್ಲಿ ಮಡಂತ್ಯಾರು ಪರಿಸರದಲ್ಲಿ ರಸ್ತೆ ಜಾಥಾ ನಡೆಸಿ ರಸ್ತೆ ಸಂಚಾರದ ನಿಯಮವನ್ನು ಮತ್ತು ಹೆಲ್ಮೇಟ್ ಧರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವಿವಾರವಾಗಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಪುಂಜಾಲಕಟ್ಟೆ ಪೊಲೀಸ್ ಸಿಬ್ಬಂದಿಗಳಾದ ವೆಂಕಪ್ಪ, ಸತೀಶ್, ಪರಮೇಶ್ವರ, ಆಸೀಫ್, ಹಾಗೂ ಸೆಕ್ರೇಡ್ ಹಾರ್ಟ್ ಕಾಜೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News