×
Ad

ಯುವ ಕಾಂಗ್ರೆಸ್ ವತಿಯಿಂದ ಬಾಲ ಪ್ರತಿಭೆ ಪಂಚಮಿ ಮಾರೂರಿಗೆ ಸನ್ಮಾನ

Update: 2016-01-20 14:42 IST

ಮೂಡಬಿದಿರೆ: ಮುಲ್ಕಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕದ ವತಿಯಿಂದ ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬಹುಮುಖ ಪ್ರತಿಭೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಪಂಚಮಿ ಮಾರೂರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.  

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸನ್ಮಾನ ಮಾಡಿ ಪಂಚಮಿ ಮಾರೂರಿಗೆ ಇನ್ನು ಮುಂದಕ್ಕೆ ಹೆಚ್ಚಿನ ಸಾಧನೆ ಮಾಡಲು ತಮ್ಮಿಂದ ಸಾದ್ಯವಾದ ಸಹಾಯ ಮಾಡುವುದಾಗಿ ತಿಳಿಸಿದರು.

ಮೂಡಬಿದಿರೆ ಯುವ ಕಾಂಗ್ರೆಸ್ ಅದ್ಯಕ್ಷ ಚಂದ್ರಹಾಸ ಸನಿಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಮಿ ಮಾರೂರು ಇವರ ಸಾಧನಾ ಪತ್ರವನ್ನು NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಜಿ ಇರ್ಷಾದ್ ವಾದಿಸಿದರು. 

ಈ ಕಾರ್ಯಕ್ರಮದಲ್ಲಿ  ಮೂಡಾ ಅಧ್ಯಕ್ಷರಾದ ಸುರೇಶ್ ಕೋಟ್ಯಾನ್ ಮೂಡಬಿದ್ರೆ ಪುರಸಭೆ ಅಧ್ಯಕ್ಷೆ ರೂಪಾ ಶೆಟ್ಟಿ, KPCC ಸದಸ್ಯರಾದ ಕೃಷ್ಣ ಮೂರ್ತಿ ಕಾರ್ಕಳ, NSUI ಜಿಲ್ಲಾದ್ಯಕ್ಷ ಆಶಿತ್ ಜಿ ಪಿರೇರಾ, ಜಿಲ್ಲಾ ಕಾರ್ಯದರ್ಶಿ ಸವದ್ ಗೋನಡ್ಕ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಮೂಡಬಿದ್ರೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಚಿನ್ ಸಾಲ್ಯಾನ್, ಜೊತೆ ಕಾರ್ಯದರ್ಶಿ ಗ್ಲೆನ್ ವಿಶಾಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News