ಜ. 26ರಿಂದ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ
ಬೆಳ್ತಂಗಡಿ: ಸಾವಿರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನವನ್ನು ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಶಿಲಾಮಯವಾಗಿ ನವೀಕರಿಸಲಾಗಿದ್ದು, ಇದರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ. 26 ರಿಂದ 31 ರವೆರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ತಿಳಿಸಿದ್ದಾರೆ.
ಅವರು ಬುಧವಾರ ದೇವಳದ ವಠಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ 6 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ವಿವರ ನೀಡಿದರು. ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ರಚನೆಗೆ ರೂ. 43.00 ಲಕ್ಷ.ಸುತ್ತು ಪೌಳಿ, ಕೆತ್ತನೆ ಕಲ್ಲಿನ ಕಂಬಗಳು, ಮೇಲ್ಚಾವಣಿಯ ಹೆಂಚು ಮತ್ತು ಸುತ್ತು ನೆಲಕ್ಕೆ ಗ್ರಾನೈಟು ಕಲ್ಲು ಹಾಸುವಿಕೆ ಹಾಗೂ ವಿದ್ಯುತ್ ಕೆಲಸಕ್ಕೆ ರೂ. 58.00ಲಕ್ಷ. ದೇವಸ್ಥಾನದ ತಡೆಗೋಡೆ, ಆವರಣ ಗೋಡೆ, ಗ್ಯಾಲರಿ ಹಾಗೂ ಮೆಟ್ಟ್ಟಿಲು ಕೆಲಸಕ್ಕೆ ರೂ. 9.50ಲಕ್ಷ.ಎದುರಿನ ಸಭಾಭವನ ಮೈದಾನ ಮತ್ತು ದೇವಸ್ಥಾನದ ಸುತ್ತಲಿನ ಸಮತಟ್ಟು ಕೆಲಸಕ್ಕೆ ರೂ. 3.90ಲಕ್ಷ.ದೇವರ ಬಾಲಾಲಯ, ದಾಸ್ತಾನು ಕೊಠಡಿ, ನಾಗನ ಕಟ್ಟೆ ಹಾಗೂ ದೈವಸ್ಥಾನದ ಕಟ್ಟೆಗಳಿಗೆ ರೂ. 6.40ಲಕ್ಷ.ದೇವಸ್ಥಾನದ ಮರ ಹಾಗೂ ಕೆತ್ತನೆ ಕೆಲಸಗಳಿಗೆ ರೂ. 7.00ಲಕ್ಷ.ದೇವಸ್ಥಾನಕ್ಕೆ ಜಾಗದ ಅಭಾವ ಇದ್ದುದರಿಂದ 77 ಸೆಂಟ್ಸ್ ಜಾಗ ಖರೀದಿಗಾಗಿ ರೂ. 25.10ಲಕ್ಷ.ಅಂದಾಜು ಈವರೆಗೆ ರೂ. 152.90ಲಕ್ಷಖರ್ಚಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ್ ವತಿಯಿಂದ ತೀರ್ಥ ಬಾವಿ, ಪಂಪು ಸೆಟ್, ನೀರಿನ ಟ್ಯಾಂಕಿ, ಪೈಪು ಲೈನ್‌ಗಾಗಿ ರೂ. 10.00ಲಕ್ಷಗಳುಮಂಜೂರಾಗಿರುತ್ತದೆ. ಶಾಸಕರ ಅನುದಾನದಿಂದ ಎರಡು ಕೊಳವೆ ಬಾವಿ ಮತ್ತು ಕಾಂಕ್ರೀಟು ರಸ್ತೆಗಾಗಿ ರೂ. 8.00ಲಕ್ಷಮಂಜೂರಾಗಿರುತ್ತದೆ. ತಾಲೂಕು ಪಂಚಾಯತ್ ಸದಸ್ಯರ ಅನುದಾನದಿಂದ ರೂ. 2.00ಲಕ್ಷಮಂಜೂರಾಗಿರುತ್ತದೆ. ಗ್ರಾಮ ಪಂಚಾಯತ್ ಸದಸ್ಯರುಗಳ ಅನುದಾನದಿಂದ ಸಮತಟ್ಟು, ಶೌಚಾಲಯ ರಚನೆ, ರಸ್ತೆ ಮತ್ತು ಮೋರಿ ರಚನೆ ಕಾಮಗಾರಿಗೆ ರೂ. 2.60ಲಕ್ಷಮಂಜೂರಾಗಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 10.00ಲಕ್ಷಗಳ
ಅನುದಾನ ಮಂಜೂರು ಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದರು. ಊರ ಹಾಗೂ ಪರವೂರ ಭಗವದ್ಬಕ್ತರ ದೇಣಿಗೆಯ ಮೂಲಕ ರೂ. 94.50ಲಕ್ಷಕೂಡಿದ್ದು, ಶ್ರಮದಾನದಮೂಲಕ ಸುಮಾರು ರೂ. 15.00ಲಕ್ಷಗಳ ಕಾಮಗಾರಿಗಳು ಆಗಿರುವುದು ವಿಶೇಷ. ಸುಮಾರು ರೂ. 33.40ಲಕ್ಷಗಳಕೊರತೆ ಇರುತ್ತದೆ. ಈಗಾಗಲೇ ಮಾನ್ಯ ಶಾಸಕರ ಮೂಲಕ ಹಿಂದೂ ಧಾರ್ಮಿಕ ಮತ್ತು ಧತ್ತಿ ಇಲಾಖೆಗೆ ರೂ. 250.00ಲಕ್ಷಗಳಅಂದಾಜು ವೆಚ್ಚ ಪಟ್ಟಿಯನ್ನು ಸಲ್ಲಿಸಿದ್ದು ಅನುದಾನವನ್ನು ನಿರೀಕ್ಷಿಸುತ್ತಿದ್ದೇವೆ. ಇನ್ನು ಮುಂದೆ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಲು ಅಂದಾಜು ರೂ. 35.00ಲಕ್ಷಗಳಅವಶ್ಯಕತೆ ಇರುತ್ತದೆ ಎಂದರು.
ಧಾರ್ಮಿಕ ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾರ್ಶಿವಾದಗಳೊಂದಿಗೆ ಹಾಗೂ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವವಳದ ಆಡಳ್ತೆ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರವರ ಸಲಹೆ, ಮಾರ್ಗದರ್ಶನದೊಂದಿಗೆ ನೆರವೇರಲಿದೆ. ಬಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮಕಲಶದ ಪೂರ್ವಭಾವಿಯಾಗಿ ಊರಿನಲ್ಲಿ ಹಾಗೂ ನೆರೆಯ ಗ್ರಾಮಗಳಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಅವರವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಎಲ್ಲಾ ಬೈಲುವಾರು ಸಮಿತಿಗಳು, ಗ್ರಾಮ ಸಮಿತಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಒಕ್ಕೂಟ ಮತ್ತು ಜ್ಞಾನವಿಕಾಸದ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ತಂಡ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಊರಿನ ಮತ್ತು ಪರವೂರಿನ ಭಗವದ್ಬಕ್ತರು ಸಾಗರೋಪಾದಿಯಲ್ಲಿ ಬಂದು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ದೇವಸ್ಥಾನದ ಎಲ್ಲಾ ಕೆಲಸಕಾರ್ಯಗಳು ಸಂಪೂರ್ಣಗೊಂಡಿದ್ದು, ಬ್ರಹ್ಮಕಲಶಕ್ಕೆ ಅಣಿಯಾಗಿ ನಿಂತಿದೆ ಎಂದರು. ಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಡಾ. ಪ್ರದೀಪ್ ನಾವೂರು. ಜೀರ್ಣೋದ್ದಾರ ಸಮಿತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಪ್ರ.ಕಾರ್ಯದರ್ಶಿ ಎ. ಬಿ. ಉಮೇಶ್ ಅತ್ಯಡ್ಕ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ. ಕಾರಿಂಜ. ಅರ್ಚಕ ಗುರುರಾಜ ಶಬರಾಯ, ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ಕೆ. ಕನಾಲು, ಕಾರ್ಯದರ್ಶಿ ಎನ್, ಗಣೇಶ್ ಗೌಡ. ನೆಲ್ಲಿಪಲ್ಕೆ, ಕೋಶಾಧಿಕಾರಿ ಬಿ. ಉಮೇಶ್ ಪ್ರಭು, ಹಡೀಲು, ಸದಸ್ಯರಾದ ಹರೀಶ್ ಸಾಲ್ಯಾನ್ ಮೋರ್ತಾಜೆ, ಧರ್ಣಪ್ಪ ಮೂಲ್ಯ ಕಾಯರ್ದಡಿ, ಶ್ರೀಮತಿ ತನುಜಾ ಶೇಖರ್, ತಿಮ್ಮಪ್ಪ ಜಿ. ಗೋಳ್ತಾರ, ತನಿಯಪ್ಪ ನಲ್ಕೆ ಕಿರ್ನಡ್ಕ, ಪೂಜಾ ಸಮಿತಿ ಕಾರ್ಯದರ್ಶಿ ಜಿ. ಸುರೇಶ್ ಗೋಳಿದಡಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಉಮೇಶ್ ಭಂಢಾರಿ, ಪರಾರಿ, ಅಶೋಕ್, ಪ್ರವೀಣ್ ವಿ ಮತ್ತಿತರರು ಇದ್ದರು.