ಬೆಳ್ತಂಗಡಿ: ಜ. 24 ರಂದು ವೈದ್ಯಕೀಯ ಉಚಿತ ಶಿಬಿರ
Update: 2016-01-20 15:43 IST
ಬೆಳ್ತಂಗಡಿ: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ಲು, ಶ್ರೀರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ, ರಾಜಕೇಸರಿ ಫ್ರೆಂಡ್ಸ್ ಹುಣ್ಸೆಕಟ್ಟೆ, ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ಹುಣ್ಸೆಕಟ್ಟೆ ಇದರ ಸಹಯೋಗದಲ್ಲಿ ಜ. 24 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1-30 ರತನಕ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ ಉದ್ಘಾಟಿಸಲಿದ್ದು, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಯು.ಕೆ.ಮೋನು ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಬಿರದಲ್ಲಿ ವೈದ್ಯಕೀಯ ಶಾಸ್ತ್ರ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ, ಮೂಳೆ, ಮಾನಸಿಕ, ದಂತ, ಚರ್ಮ ರೋಗ, ಕ್ಷಯ ಮತ್ತು ಶ್ವಾಸಕೋಶ, ನೇತ್ರ, ಕಿವಿ,ಮೂಗು, ಗಂಟಲು ತಜ್ಞರುಗಳು ತಪಾಸಣೆ ನಡೆಸಲಿದ್ದಾರೆ. ಸಕ್ಕರೆ ಕಾಯಿಲೆ ರಕ್ತ ತಪಾಸಣೆಯೂ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9901947498, 7353773782 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.