ಮೂಡಬಿದ್ರೆ : ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
Update: 2016-01-20 18:22 IST
ಮೂಡಬಿದ್ರೆ; ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸೋಮವಾರ ಮತ್ತು ಮಂಗಳವಾರ ಜರುಗಿದ ‘ಮೀಡಿಯಾ ಮಂಥನ 2016’ ರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಳ್ವಾಸ್ ಪದವಿ ಪತ್ರಿಕೋದ್ಯಮದ 11 ವಿದ್ಯಾರ್ಥಿಗಳು 2 ದಿನಗಳ ಕಾಲ ನಡೆದ ‘ಸಾಮಾಜಿಕ ಮಾಧ್ಯಮ ಮತ್ತು ಪರಿಣಾಮಗಳು’ ವಿಚಾರ ಸಂಕಿರಣ ಮತ್ತು ಅದಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತೊಮ್ಮೆ ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಫಲಿತಾಂಶ ವಿವರ; ಸ್ಟ್ರೆಸ್ ಇಂಟರ್‌ವ್ಯೆ(ಪ್ರಥಮ) ಪ್ರಣವೇಶ್ವರ್, ಮೈಮ್(ದ್ವಿತೀಯ), ಫೋಟೋಗ್ರಾಫಿ(ದ್ವಿತೀಯ) ಅನ್ವಯ.ಯಂ, ರಸಪ್ರಶ್ನೆ(ಪ್ರಥಮ) ಪಿ.ಪಿ.ಟಿ(ಪ್ರಥಮ).