ಕಾಸರಗೋಡು : ಕಾರಿಗೆ ಸುಮೋ ವಾಹನ ಡಿಕ್ಕಿ - ಓರ್ವ ಗಂಭೀರ
Update: 2016-01-20 18:43 IST
ಕಾಸರಗೋಡು : ಕಾರಿಗೆ ಸುಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಅಣ೦ಗೂರಿನಲ್ಲಿ ಬುಧವಾರ ನಡೆದಿದ್ದು , ಓರ್ವ ಗಂಭೀರ ಗಾಯಗೊಂಡಿದ್ದು , ಉಳಿದ ನಾಲ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಗೊಂಡ ಚೆಟ್ಟು೦ಗುಯಿಯ ಇರ್ಶಾದ್ ( ೧೭) ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಟ್ಜ್ ಕಾರು ಕೋಳಿ ಹೇರಿಕೊಂಡು ತೆರಳುತ್ತಿದ್ದ ಸುಮೋ ನಡುವೆ ಅಪಘಾತ ಸಂಭವಿಸಿದೆ. ಇರ್ಶಾದ್ ಸೇರಿದಂತೆ ಕಾರಿನಲ್ಲಿ ಐವರು ಪ್ರಯಾಣಿಕ ರಿದ್ದರು. ಎರಡು ವಾಹನ ಗಳು ಹಾನಿಗೊಂಡಿದೆ. ವಿದ್ಯಾನಗರ ಟಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.