×
Ad

ಕಾಸರಗೋಡು : ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Update: 2016-01-20 19:58 IST

ಕಾಸರಗೋಡು :  ಕಾರು ಡಿಕ್ಕಿ ಹೊಡೆದು  ಪಾದಾಚಾರಿ ಮ್ರತಪಟ್ಟ ಘಟನೆ ಬುಧವಾರ  ಸಂಜೆ   ವಿದ್ಯಾನಗರದಲ್ಲಿ ನಡೆದಿದೆ.
ಮ್ರತಪಟ್ಟವರನ್ನು   ವಿದ್ಯಾನಗರ  ಉದಯಗಿರಿಯ  ನಾರಾಯಣ ( ೬೪) ಎಂದು ಗುರುತಿಸಲಾಗಿದೆ.
ಜಿಲಾಧಿಕಾರಿ ಕಚೇರಿ ಮುಂಭಾಗದ  ರಸ್ತೆ ದಾಟುತ್ತಿದ್ದಾಗ  ಅತೀ ವೇಗದಿಂದ ಬಂದ ಕಾರು ಡಿಕ್ಕಿ  ಹೊಡೆದಿದ್ದು , ಕೂಡಲೇ  ಕಾಸರಗೋಡು  ಖಾಸಗಿ  ಆಸ್ಪತ್ರೆಗೆ ತಲುಪಿಸಿದರೂ   ಚಿಕಿತ್ಸೆಗೆ ಸ್ಪಂದಿಸದೆ  ಮ್ರತಪಟ್ಟರು. 
ಮ್ರತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ  ಶವಾಗಾರದಲ್ಲಿರಿಸಲಾಗಿದೆ.  ವಿದ್ಯಾನಗರ ಟಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News