ಮಂಗಳೂರು,ಜ.23 :ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
ಮಂಗಳೂರು,ಜ.23: ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾದಿಸಿದ ಹಿನ್ನೆಲೆಯಲ್ಲಿ ಜ.23 ರಂದು ಬೆಳಿಗ್ಗೆ 11ಗಂಟೆಗೆ ಕುಲಶೇಖರ ಕೋರ್ಡೆಲ್ ಸಭಾಂಗಣದಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಎಐಸಿಸಿ ಪ್ರ.ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್, ಚುನಾವಣಾ ವೀಕ್ಷಕ ಸುದರ್ಶನ್, ಜಿಲ್ಲಾ ಉಸ್ತುವಾರಿಗಳಾದ ಮುನಿಯಪ್ಪ, ನಾಣಯ್ಯ, ವೀಣಾ ಅಚ್ಚಪ್ಪ , ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ವಿನಯಕುಮಾರ್ ಸೊರಕೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಜಯಭೇರಿ ಸಾದಿಸಲಿದೆ. ಚುನಾವಣೆಗೆ ಬೇಕಾದ ಪೂರ್ವಭಾವಿ ಸಿದ್ದತೆ, ವೀಕ್ಷಕರ ನೇಮಕ ನಡೆಯುತ್ತಿದೆ. ಅನುಭವ, ಸಚ್ಚಾರಿತ್ರಾ , ಜನರ ಮೇಲಿನ ಪ್ರೀತಿ ವಿಶ್ವಾಸ, ಜನಬೆಂಬಲ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಮುಖಂಡರುಗಳಾದ ಸುೀರ್ ಟಿ.ಕೆ, ಬಲರಾಜ್ ರೈ, ಶಶಿಧರ್ ಹೆಗ್ಡೆ, ಪದ್ಮನಾಭ ನರಿಂಗಾನ, ನಾಗೇಂದ್ರ ಕುಮಾರ್, ವಿಶ್ವಾಸ್‌ದಾಸ್, ನಝೀರ್ ಬಜಾಲ್, ಅಬ್ದುಲ್ ರವೂಫ್, ರಮಾನಂದ ಪೂಜಾರಿ, ಅಶೋಕ್ ಡಿ.ಕೆ, ವಿನಯ್‌ರಾಜ್ ಉಪಸ್ಥಿತರಿದ್ದರು.