ರೋಹಿತ್ ಸಾವು ಉನ್ನತ ಮಟ್ಟದ ತನಿಖೆಗೆ ಎಸ್‌ಐಓ ಆಗ್ರಹ
ಮಂಗಳೂರು.ಜ, 20:ಹೈದರಾಬಾದ್ ವಿಶ್ವ ವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ಸಾವು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಎಸ್‌ಐಓ ಸಂಘಟನೆ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಕಾರ ಕಚೇರಿವರೆಗೆ ಜಾಥ ನಡೆಸಿ ಆಗ್ರಹಿಸಿತು.
ಹೈದರಾಬಾದ್ ವಿಶ್ವ ವಿದ್ಯಾನಿಲಯ ಐದು ಮಂದಿ ದಲಿತ ವರ್ಗದ ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ಕ್ರಮ ಖಂಡನೀಯ.ಈಘಟನೆಯಲ್ಲಿ ಅಮಾನತಿಗೆ ಕಾರಣರಾಗಿರುವ ಐದು ವಿದ್ಯಾರ್ಥಿಗಳ ಪೈಕಿರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿ ಕಾರಣವಾಗಿದೆ .
ಈ ಹಿನ್ನೆಲೆಯಲ್ಲಿಕೇಂದ್ರ ಕಾರ್ಮಿಕ ಸಚಿವಬಂಡಾರು ದತ್ತಾತ್ತೇಯ ,ಕೇಂದ್ರ ಮಾನವ ಸಂಪನ್ಮೂಲ ಸಚಿವ ಸ್ಮತಿ ಇರಾನಿ ಯವರಿಂದಕಳುಹಿಸಿರುವಇ-ಮೇಲ್ ಸಂದೇಶಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಈ ಮೂಲಕ ಅನ್ಯಾಯವಾದ ದಲಿತ ಸಂಶೋಧನಾವಿ ದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕಾಗಿದೆ ಎಂದು ಎಸ್‌ಐಓ ಆಗ್ರಹಿಸುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ರಫೀಕ್ ಬೀದರ್ ಬಳಿಕ ಜಿಲ್ಲಾಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಿದ್ದಾರೆ.
ದಲಿತರ ಶೈಕ್ಷಣಿಕ ಪ್ರಗತಿಯನ್ನು ಸಹಿಸಿದವರಿಂದ ನಡೆಯುತ್ತಿರುವ ಕೃತ್ಯ:- ರೋಹಿತ್ ಆತ್ಮಹತ್ಯೆ ಪ್ರಕರಣ ದೇಶದಲ್ಲಿ ದಲಿತರ ಪ್ರಗತಿಯನ್ನು ಸಹಿಸಲು ಸಾಧ್ಯವಾಗದ ವ್ಯಕ್ತಿಗಳ,ಪರಧರ್ಮ ಪರರ ವಿಚಾರಗಳನ್ನು ಗೌರವಿಸದವ್ಯಕ್ತಿಗಳಿಂದ ನಿತ್ಯ ನಡೆಯುತ್ತಿರುವ ದೌರ್ಜನ್ಯದ ಪ್ರತೀಕವಾಗಿದೆ.ಈ ಪೈಕಿ ಹೈದರಾಬಾದ್ ವಿಶ್ವ ವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಒಂದು ಉದಾಹರಣೆ.ರೋಹಿತ್ ಆತ್ಮ ಹತ್ಯೆ ಪ್ರಕರಣಕ್ಕೆ ಒಂದು ಸಾಮಾಜಿಕ ರಾಜಕೀಯ ಆಯಾಮ ಇನ್ನೊಂದು ಅಕಾಡೆಮಿಕ್ ವರ್ಗದಲ್ಲಿ ನಡೆಯುತ್ತಿರುವ ಆಯಾಮ ಇದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಬಾರಕೂರು ಉದಯ ತಿಳಿಸಿದ್ದಾರೆ.
ದೇಶದಲ್ಲಿ ಸಂವಿಧಾನ ರಚನೆಯಾದ ಬಳಿಕ ವೌನಕ್ರಾಂತಿ ನಡೆದು ಸಮಾಜದಲ್ಲಿ ದಲಿತ ಹಿಂದುಳಿದ ವರ್ಗಗಳ ಜನರು ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಸಂವಿಧಾನ ದಲಿತರಿಗೆಮಾತನಾಡಲು ಶಕ್ತಿ ನೀಡಿದೆ.ಕಾನೂನು ಬದ್ಧವಾಗಿ ಮಾತನಾಡುತ್ತಿರುವ ದಲಿತರನ್ನು ಇತರ ತಂತ್ರಗಳ ಮೂಲಕ ಧಮನಿಸಲು ಬೇರೆ ಬೇರೆ ತಂತ್ರಗಳನ್ನು ಹೆಣೆಯಲಾಗುತ್ತಿದೆ.ಇಂತಹ ತಂತ್ರಗಳಿಗೆ ದಲಿತರು ಬಲಿಯಾಗಬಾರದು. ಮಾನಸಿಕವಾಗಿ ಧೃತಿ ಗೆಡಬಾರದು ರೋಹಿತ್ ವೇಮುಲ ಸಾವು ನಮೆಗೆಲ್ಲಾ ನೋವನ್ನುಂಟುಮಾಡಿದೆ.
ಶೈಕ್ಷಣಿಕವಾಗಿಎತ್ತರಕ್ಕೆ ಬೆಳೆದಿರುವಆತ ಆತ್ಮಹತ್ಯೆಯ ಹಾದಿ ಹಿಡಿಯಬಾರದಿತ್ತು ಎಂದು ಪ್ರೊ.ಉದಯ ಬಾರಕೂರು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಪ್ರತಿಭಟನಾ ರ್ಯಾಲಿಮತ್ತು ಸಭೆಯಲ್ಲಿ ಎಸ್.ಐ.ಓ ಸಂಘಟನೆಯ ಪದಾಕಾರಿಗಳುಮಂಗಳೂರುವಿ.ವಿ.ಸಮಶೋಧನಾವಿದ್ಯಾರ್ಥಿಅರುಣ್ ಕುಮಾರ್,ಜಮಾತೆಇಸ್ಲಾಂ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞ,ಎಸ್‌ಐಓ ಸಂಘಟನೆಯಮುಖಂಡರುಮತ್ತು ಪದಾಕಾರಿಗಳಾದ ,ಶಬೀರ್ ,ತಲ್ಹಾ ಇಸ್ಮಾಯಿಲ್,ದಾನಿಶ್ ಮೊದಲಾದವರು ಉಪಸ್ಥಿತರಿದ್ದರು.