×
Ad

ಸ್ಪೋರ್ಟ್ಸ್ ಫಾರ್ ಪೀಸ್ ಸ್ಪೋರ್ಟ್ಸ್ ಡೇ

Update: 2016-01-20 23:52 IST

 ಮಂಗಳೂರು, ಜ.20: ನಗರದ ಸ್ನೇಹಾ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ, ಎ. ಆರ್.ಕೆ. ಹೈಯರ್ ಪ್ರೈಮರಿ ಸ್ಕೂಲ್ ಬೆಂಗರೆ ಕಸ್ಬಾ, ಬ್ರೈಟ್ ಮಾಡೆಲ್ ಸ್ಕೂಲ್, ಕುದ್ರೋಳಿ, ಹಿರಾ ಪಬ್ಲಿಕ್ ಸ್ಕೂಲ್ ಕೃಷ್ಣಾಪುರ ಇದರ ಜಂಟಿ ಆಶ್ರಯದಲ್ಲಿ ‘ಸ್ಪೋರ್ಟ್ಸ್ ಫಾರ್ ಪೀಸ್ ಸ್ಪೋರ್ಟ್ಸ್ ಡೇ -2016’ ನಗರದ ಮಂಗಳಾ ಸ್ಟೇಡಿಯಂನಲ್ಲಿ ನಡೆಯಿತು. ಶಾಂತಿ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಎಂ. ಶರೀಫ್ ಧ್ವಜಾರೋಹಣಗೈದು, ಕ್ರೀಡಾಕೂಟವನ್ನು ಉದ್ಘಾಟಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್‌ಗಳಾದ ಅಬ್ದುಲ್ ಅಝೀಝ್ ಕುದ್ರೋಳಿ, ಮೀರಾ ಕರ್ಕೇರಾ, ನಾಲ್ಕೂ ಶಾಲೆಗಳ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News