ಪ್ರಥಮ ಪ್ರಯತ್ನದಲ್ಲಿ ಸಿ.ಎ. ಉತ್ತೀರ್ಣರಾದ ಅಭಿರಾಮ್
Update: 2016-01-21 15:40 IST
ಮುಲ್ಕಿ, ಜ.21: ಹೊಸದಿಲ್ಲಿಯ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನವಂಬರ್‌ನಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಶ್ರಂಗೇರಿ ಕೆರೆಮನೆ ನಿವಾಸಿ ಹಿರಿಯ ಲೆಕ್ಕ ಪರಿಶೋಧಕ ಪ್ರಭಾಕರ್ ಮತ್ತು ವಿಜಯಲಕ್ಷ್ಮೀ ಅವರ ಪುತ್ರ ಅಭಿರಾಮ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರಿನ ಲೆಕ್ಕ ಪರಿಶೋಧಕ ಮೆಹೆತಾ ಮತ್ತು ಟಾಡಿಮಾಲ್ ಕಂಪೆನಿಯಲ್ಲಿ ತರಬೇತು ಪಡೆದಿದ್ದಾರೆ.