ಕಿನ್ನಿಗೋಳಿ; ತುಳು ನಾಟಕ ಸಂಸ್ಥೆಯ ಸತತ 10ನೇ ವರ್ಷದ ಮುಂಬೈ ಪ್ರವಾಸ
ಕಿನ್ನಿಗೋಳಿ, ಜ.21: ಕರಾವಳಿ ಜಿಲ್ಲೆಗಳಲ್ಲಿ ಕಳೆದ 16 ವರ್ಷಗಳಿಂದ ತುಳು ನಾಟಕ ಪ್ರದರ್ಶನದ ಜೊತೆಗೆ ತುಳು ರಂಗಭೂಮಿಯ ಸೇವೆಯನ್ನು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ನಡೆಸಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಕಿನ್ನಿಗೋಳಿಯ ವಿಜಯಕಲಾವಿದರು ತುಳು ನಾಟಕ ಸಂಸ್ಥೆಯ ಸತತ 10ನೇ ವರ್ಷದ ಮುಂಬೈ ಪ್ರವಾಸ ಜನವರಿ 24ರಿಂದ ಪ್ರಾರಂಭಗೊಳ್ಳಲಿದೆ ಎಂದು ವಿಜಯ ಕಲಾವಿದರು ಸಂಸ್ಥೆಯ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ಹೇಳಿದರು.
ಈ ಬಗ್ಗೆ ಕಟೀಲು ದೇವಲದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 24ರಂದು ಮಾಟುಂಗಾದ ವಿಶ್ವೇಶ್ಯರಯ್ಯ ಸಭಾಗೃಹದಲ್ಲಿ ಸಂಜೆ 6ಕ್ಕೆ ಪ್ರಸಾದ್ ಶೆಟ್ಟೀ ಕೂಟ್ರಪಾಡಿಯವರ ಸಂಯೋಜನೆಯಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ. ಜ29 ರಂದು ಅದೇ ಸಭಾಗೃದಲ್ಲಿ ಮಧ್ಯಾಹ್ನ 3 ಕ್ಕೆ ಊರ ಸಂಚಾಲಕ ಸಾಯಿನಾಥ ಶೆಟ್ಟಿ ಮುಂಬೈ ಸಂಚಾಲಕ ಪ್ರಕಾಶ್ ಎಮ್ ಶೆಟ್ಟಿ ಸುರತ್ಕಲ್ ಸಂಯೋಜನೆಯಲ್ಲಿ ದಶಮಾನೋತ್ಸವದ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ವಿಜಯಾ ಕಲಾವಿದರ ಸರ್ವ ಕಲಾವಿದರ ಸಹಿತ ಮುಂಬೈನ ರಂಗ ಸಂಘಟಕರಾದ ಮೂಳೂರು ಸಂಜೀವ ಡಿ ಕಾಂಚನ್ ಕರುಣಾಕರ ಶೆಟ್ಟಿ ಕುಕ್ಕುಂದೂರು ಕರ್ನೂರು ಮೋಹನ ರೈ ಹಾಗೂ ಪ್ರಕಾಶ್ ಎಮ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು ಎಂದರು.
ಬಳಿಕ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ, ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದೊಂದಿಗೆ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರ ಸಹಕಾರದಲ್ಲಿ, ಸಾಯಿನಾಥ ಶೆಟ್ಟಿ ಮುಂಡ್ಕೂರುರವರ ಊರಿನ ಸಂಚಾಲಕತ್ಚ, ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್‌ರವರ ಮುಂಬಯಿ ಸಂಚಾಲಕತ್ವದಲ್ಲಿ ವಿಜಯಾ ಕಲಾವಿದರ ತಂಡ ಜನವರಿ 31ರ ವರೆಗೆ ಮುಂಬೈ ಹಾಗೂ ಪೂನಾದಲ್ಲಿ ವಿವಿಧೆಡೆ ನಾಟಕ ಪ್ರದರ್ಶನ ನಡೆಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೊಡೆತ್ತೂರು ಭವನಾಭಿರಾಮ ಉಡುಪ, ಅಧ್ಯಕ್ಷ ಶರತ್ ಶೆಟ್ಟಿ, ಸಂಚಾಲಕ ಸಾಯಿನಾಥ ಶೆಟ್ಟಿ, ಕಾರ್ಯದರ್ಶೀ ಲಕ್ಷ್ಮಣ ಬಿ.ಬಿ., ನಿವಾಘ್ಕ ಸುಧಾಕರ ಸಾಲ್ಯಾನ್ ಮತ್ತಿತರರಿದ್ರು.