ಕರಾವಳಿ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಯೂತ್ ಫೆಸ್ಟ್
ಮಂಗಳೂರು,ಜ.21:ನಗರದ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕರಾವಳಿ ಕಾಲೇಜಿನ ಇಂಟೀರಿಯರ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ವಿಭಾಗಗಳ ಹಾಗೂ ಕರಾವಳಿ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಎಂ.ಬಿ.ಎ ಸ್ನಾತಕೋತರ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾದ ರಾಷ್ಟ್ರ ಮಟ್ಟದ ಯೂತ್ ಫೆಸ್ಟ್ ಡಿಸೈನ್ ಫಿಯೆಸ್ಟ 2016 ಸಮರೋಪ ಸಮಾರಂಭ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್(ರಿ.)ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಬಹುಮಾನವನ್ನು ವಿತರಿಸಿದರು. ಸಮಾರಂಭದಲ್ಲಿ ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಲತಾ.ಜಿ.ರಾವ್, ಪ್ರಾಂಶುಪಾಲ ಡಾ. ನಾರಾಯಣ ಸ್ವಾಮಿ, ಪ್ರೊ. ಆರ್ ಕೆ. ಭಟ್, ಪ್ರೊ. ಆನಂದ್, ಪ್ರೊ. ಮೋಹನ್ ನಾಯ್ಕೊ,ಉಪಸ್ಥಿತರಿದ್ದರು.ಉಪನ್ಯಾಸಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಡಿಸೈನ್ ಫಿಯೆಸ್ಟ-2016 ಸಮಗ್ರ ಪ್ರಥಮ ಪ್ರಶಸ್ತಿ ಎಸ್.ಡಿ.ಎಂ. ಮಂಗಳೂರು, ದ್ವಿತೀಯ ಸಮಗ್ರ ಪ್ರಶಸ್ತಿ ಇಂದಿರಾ ಶಿವರಾವ್ ಕಾಲೇಜು ಉಡುಪಿ, ಮತ್ತು ತೃತೀಯ ಸಮಗ್ರ ಪ್ರಶಸ್ತಿ ಕೆ.ಎಲ್.ಇ.ಸಿ.ಐ,ಎಮ್ ಕಾಲೇಜು ಹುಬ್ಬಳ್ಳಿ ಪಡೆದುಕೊಂಡಿದೆ.