ಟರ್ಕಿಯಲ್ಲಿ ಸಾವಿರ ವರ್ಷ ಹಳೆಯ ಆಲಿವ್ ಮರ ಸ್ಥಳಾಂತರ !
Update: 2016-01-21 19:49 IST
ಇಸ್ತಾಂಬುಲ್: ಸಾವಿರ ವರ್ಷಗಳಷ್ಟು ಹಳೆಯದಾದ ಆಲಿವ್ ಮರವೊಂದನ್ನು ಅಯೆಗಾನ್ ಪ್ರಾಂತ್ಯದ ಒಡೆಮಿಸ್ ಜಿಲ್ಲೆಯಿಂದ ದಕ್ಷಿಣ ಪ್ರಾಂತ್ಯದ ಅಂಟಾಲಿಯಕ್ಕೆ ಸ್ಥಳಾಂತರ ಮಾಡಲಾಗಿದೆ. 1071ರಲ್ಲಿ ಇದನ್ನು ಒಡೆಮಿಸ್ ನಲ್ಲಿ ನೆಡಲಾಗಿತ್ತು. ಜಾಗತಿಕ ಸಸ್ಯಶಾಸ್ತ್ರದ ವಸ್ತು ಪ್ರದರ್ಶನದಲ್ಲಿ ಇದನ್ನು ಭಾಗಿಗೊಳಿಸಲಾಗುದು.
ಸುಮಾರು 2.5 ಮೀಟರ್ ವ್ಯಾಸದ ಬಹಳ ಹಳೆಯ ಮರ ಇದಾಗಿದೆ. ಕಳೆದ ಮಂಗಳವಾರ ಈ ಸ್ಥಳಾಂತರ ಕಾರ್ಯಕ್ರಮಮದಲ್ಲಿ ಅಧ್ಯಕ್ಷ ತಯ್ಯಿಪ್ ಉರ್ದುಗಾನ್ ಸ್ವತಹ ಭಾಗವಹಿಸಿದ್ದರು. ಈ ಮರವು ತನ್ನ ಹೊಸ ಸ್ಥಳದಲ್ಲಿ ಬೆಳೆಯಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಇತಿಹಾಸವನ್ನು ನೆನಪಿಸುವ ಭವಿಷ್ಯವನ್ನು ಸಾಂಕೇತಿಸುವ ಮರವಿದು ಹಾಗೂ ಅಂಟಾಲಿಯಾದ ಜಾಗತಿಕ ಎಕ್ಸ್ ಪೋ 2016ರಲ್ಲಿ ಇದು ಭಾಗವಹಿಸಲಿರುವುದು ಎಂದು ಅವರು ತಿಳಿಸಿದ್ದಾರೆ.