ಮರ್ಧಾಳ: ಕಥಾ ಪ್ರಸಂಗ
Update: 2016-01-21 22:17 IST
ಮರ್ಧಾಳ; ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಂಗ ಸಂಸ್ಥೆಯಾದ ನುಸ್ರತುಲ್ ಇಸ್ಲಾಂ ಯೂತ್ ಫೆಡರೇಶನ್ (ರಿ.)ನ ೧೫ನೇ ವಾರ್ಷಿಕೋತ್ಸವದ ಪ್ರಯುಕ್ತ ೨ ದಿನಗಳ ಕಥಾ ಪ್ರಸಂಗವು ಮರ್ಧಾಳ ಜುಮಾ ಮಸೀದಿಯ ವಠಾರದಲ್ಲಿ ಗುರುವಾರ ರಾತ್ರಿ ನಡೆಯಿತು.
ಕೇರಳದ ಕೊಡುವಳ್ಳಿಯ ಕೆ.ಸಿ.ಎ. ಕುಟ್ಟಿ ಹಾಗೂ ಸಂಗಡಿಗರು ನಿನಮಣಿಞ ಕರ್ಬಲಾ ಚರಿತ್ರೆಯ ಕುರಿತು ಕಥಾಪ್ರಸಂಗವನ್ನು ಅವತರಿಸಿದರು.
ಸಯ್ಯದ್ ಇಸ್ಮಾಯಿಲ್ ತಂಙಳ್ ಸಅದಿ ಅಲ್ ಅದ್ ಹಲ್ ಆದೂರು ದುಆಃ ನೆರವೇರಿಸಿದರು.
ವೇದಿಕೆಯಲ್ಲಿ ಶಾಹುಲ್ ಹಮೀದ್ ತಂಙಳ್ ಮರ್ಧಾಳ, ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.