×
Ad

ಚುಟುಕು ಸುದ್ದಿಗಳು

Update: 2016-01-21 23:14 IST

ಅರ್ಜಿ ಆಹ್ವಾನ
 ಸಹಾಯಕ ಪ್ರಾಧ್ಯಾಪಕ ಹುದ್ದೆ ಉಡುಪಿ, ಜ.21: ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಪಿಎಚ್‌ಡಿ ಅಧ್ಯಯನ ಸಂಬಂಧ ಎಫ್‌ಡಿಪಿ ಯೋಜನೆಯಡಿ 2 ವರ್ಷಗಳ ಅವಧಿಗೆ ನಿಯೋಜಿತಗೊಂಡಿದ್ದು, ಈ ಪ್ರಾಧ್ಯಾಪಕರ ವಾರಕ್ಕೆ 16 ಗಂಟೆಗಳ ಕಾರ್ಯಾಭಾರಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 ವಾಣಿಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ(ಪ.ಜಾ./ಪ.ವರ್ಗದ ಅ್ಯರ್ಥಿಗಳಿಗೆ ಶೇ.50)ಗಳನ್ನು ಪಡೆದಿರಬೇಕು ಹಾಗೂ ಎನ್‌ಇಟಿ/ಎಸ್‌ಎಲ್‌ಇಟಿ/ಪಿಎಚ್‌ಡಿ ಪದವಿ ಹೊಂದಿರಬೇಕು.ಹುದ್ದೆ ತಾತ್ಕಾಲಿಕವಾಗಿದ್ದು, ಆಸಕ್ತರು ಜ.28ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರ್(ದೂ.: 08254-251068)ನ್ನು ಸಂಪರ್ಕಿಸುವಂತೆ ಪ್ರಕಟನೆೆ ತಿಳಿಸಿದೆ.

ಅಲ್ಪಾವಧಿ ಕೋರ್ಸ್‌ಗಳ ತರಬೇತಿ
ಮಂಗಳೂರು, ಜ.21: ಮಂಗಳೂರು ಮಹಾನಗರ ಪಾಲಿಕೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ 18ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಕದ್ರಿಹಿಲ್ಸ್‌ನಲ್ಲಿ ರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧಅಲ್ಪಾವಧಿ ಕೋರ್ಸ್‌ಗಳ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ರೇಶನ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಕೈಗಾರಿಕಾ ತರಬೇತಿ ಸಂಸ್ಥೆ, ಕದ್ರಿಹಿಲ್ಸ್ ಮಂಗಳೂರು ಅಥವಾ ಲಾಲ್‌ಬಾಗ್ ಮನಪಾ ನಗರ ಬಡತನ ನಿರ್ಮೂಲನ ಕೋಶ ದೂ. 0824-2220340/ 0824-2211285 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.


ನಾಳೆ ಕಾವಿ ಚಿತ್ತಾರ-ಗೀರುಶಿಲ್ಪ ಪ್ರದರ್ಶನ
ಉಡುಪಿ, ಜ.21: ಕಾವಿ ಚಿತ್ತಾರ ಮತ್ತು ಗೀರು ಶಿಲ್ಪ ರಚನೆಯ ಮೊದಲ ಪ್ರಯೋಗ ಹಾಗೂ ಪ್ರದರ್ಶನವನ್ನು ಸುಳ್ಯ ಮೊಗರ್ಪಣೆಯ ‘ಕಾವ್ಯಕಾವೇರಿ’ಯಲ್ಲಿ ಜ.23ರಂದು ಬೆಳಗ್ಗೆ 10:30ರಿಂದ ಸಂಜೆ 4:30ರವರೆಗೆ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10:30ಕ್ಕೆ ‘ಕಾವ್ಯ ಕಾವೇರಿ’ ಕಾವಿ ಕುಟೀರವನ್ನು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸುವರು ಎಂದು ಕರ್ನಾಟಕ ಜಾನಪದ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಎ.ಕೃಷ್ಣಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಪರಾಹ್ನ 2:30ರಿಂದ ಡಾ.ಯು.ಸಿ.ನಿರಂಜನ್ ಅಧ್ಯಕ್ಷತೆಯಲ್ಲಿ ಗೋಷ್ಠಿ ಮತ್ತು ಸಂವಾದ ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಸುಳ್ಯ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ವಹಿಸಲಿದ್ದಾರೆ. ಶಾಲಾ ಮಕ್ಕಳಿಗೆ ಮತ್ತು ಆಸಕ್ತರಿಗೆ ಗೀರು ಶಿಲ್ಪ ಪಾತ್ರಕ್ಷಿಕೆಯನ್ನು ಆಯೋಜಿಸಲಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಲಾವಿದ ಕೆ.ಎಲ್.ಭಟ್, ಕಲಾವಿದೆ ವೀಣಾ ಶ್ರೀನಿವಾಸ ಉಪಸ್ಥಿತರಿದ್ದರು.


ಇಂದು ಬಿಜೆಪಿ ಕಾರ್ಯಕರ್ತರ ಸಭೆ
ಮಂಗಳೂರು, ಜ.21: ದ.ಕ. ಜಿಪಂ, ತಾಪಂ ಚುನಾವಣೆಗೆ ಕಾರ್ಯಕರ್ತರನ್ನು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸುವ ಸಲುವಾಗಿ ಬಿಜೆಪಿ ಕಾರ್ಯಕರ್ತರ ಸಮಾವೇಶವು ಜ.22ರಂದು ಬೆಳಗ್ಗೆ 10:30ಕ್ಕೆ ಫರಂಗಿಪೇಟೆ ಯಶಸ್ವಿಹಾಲ್‌ನಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

ನಾಳೆಯಿಂದ ಕಿಶೋರ ಯಕ್ಷೋತ್ಸವ
ಕಾರ್ಕಳ, ಜ.21: ಸ್ಥಳೀಯ ಯಕ್ಷಕಲಾ ರಂಗದ ವತಿಯಿಂದ ಕಿಶೋರ ಯಕ್ಷೋತ್ಸವ-2016 ಅನಂತಶಯನ ಕಸ್ತೂರಿ ಸಾಂಸ್ಕೃತಿಕ ರಂಗ ಮಂಟಪದಲ್ಲಿ ಜ.23 ಮತ್ತು 24ರಂದು ನಡೆಯಲಿದೆ. ಅಂದು ಬೆಳಗ್ಗೆ 9:30ಕ್ಕೆ ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ಆಶೀರ್ವಚನ ನೀಡುವರು. ಯಕ್ಷೋತ್ಸವದಲ್ಲಿ 23ರಂದು ರಾಮಾಶ್ವಮೇಧ, ಭಕ್ತ ಮಾರ್ಕಾಂಡೇಯ, ಧಕ್ಷಾಧ್ವರ, ಗುರುದಕ್ಷಿಣೆ, ಭಕ್ತಾಂಜನೇಯ, 24ರಂದು ಸುದರ್ಶನ ಗರ್ವಭಂಗ, ಸುಂದೋಪಸುಂದ, ಕಾಳಿಂಗ ಮರ್ಧನ, ಪಂಚವಟಿ, ಲಂಕಾದಹನ, ಅಶ್ವಮೇಧ ಯಕ್ಷಗಾನಗಳು ಪ್ರದರ್ಶನಗೊಳ್ಳಲಿವೆ.


ಜ.27: ಸರಕಾರಿ ನೌಕರರ ಕ್ರೀಡಾಕೂಟ
ಮಂಗಳೂರು,ಜ.21: ಕರ್ನಾಟಕ ರಾಜ್ಯ ಸರಕಾರಿ ನೌಕರರ 2015ನೆ ಸಾಲಿನ ದ.ಕ ಜಿಲ್ಲಾ ಮಟ್ಟದ ಕ್ರೀಡಾಕೂಟವು ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ.27ರಂದು ಬೆಳಗ್ಗೆ 9ಕ್ಕೆ ಉದ್ಘಾಟನೆಯಾಗಲಿದೆ.
 ನಂತರ ಅಥ್ಲೆಟಿಕ್ ಸ್ಪರ್ಧೆಗಳು ಮಂಗಳೂರು ಕ್ರೀಡಾಂಗಣದಲ್ಲಿ ನಡೆಯಲಿರುವುದು. ಸಾಂಸ್ಕೃತಿಕ ಸ್ಪರ್ಧೆಗಳನ್ನು ಜ. 28 ರಂದು ಬೆ.10 ರಿಂದ ಸರಕಾರಿ ನೌಕರರ ಭವನ(ಎನ್.ಜಿ.ಒ) ದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.


ಇಂದು ತೊಕ್ಕೊಟ್ಟಿನಲ್ಲಿ ವಿಶೇಷ ಉಪನ್ಯಾಸ
ಉಳ್ಳಾಲ, ಜ.21: ಜಮಾಅತೆ ಇಸ್ಲಾಮೀ ಹಿಂದ್‌ನ ಉಳ್ಳಾಲ ಶಾಖೆಯ ವತಿಯಿಂದ ಜ.22ರಂದು ಮಗ್ರಿಬ್ ನಮಾಝ್ ಬಳಿಕ ತೊಕ್ಕೊಟ್ಟಿನ ಮಸ್ಜಿದುಲ್ ಹುದಾದಲ್ಲಿ ‘ಸಹಿಷ್ಣುತೆ ಪ್ರವಾದಿ ಜೀವನದ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಪ್ರವಚನಕಾರರಾಗಿ ಜಮಾಅತೆ ಇಸ್ಲಾಮೀ ಹಿಂದ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ನಾಸಿರ್ ಚೆರುಕರ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.


ಇಂದು ತಾಜುಲ್ ಉಲಮಾ ಅನುಸ್ಮರಣೆ
ಉಪ್ಪಿನಂಗಡಿ, ಜ.21: ಎಸ್ಸೆಸ್ಸೆಫ್ ಬೇಂಗಿಲ ಶಾಖೆಯ ಆಶ್ರಯದಲ್ಲಿ ಜ.22ರಂದು ರಾತ್ರಿ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದೆ.
 ಅಸೈಯದ್ ಕಿಲ್ಲೂರ್ ತಂಙಳ್ ದುಆಗೈಯುವರು. ಎಸ್ಸೆಸ್ಸೆಫ್ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಎಸ್.ಎಂ. ಝೈನಿ ಕಾಮಿಲ್ ಸಖಾಫಿ ಮುಖ್ಯಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.


ಇಂದು ಎಲ್‌ಐಎಎಫ್ ಸುವರ್ಣ ಮಹೋತ್ಸವ
ಮಂಗಳೂರು, ಜ.21: ಲೈಫ್ ಇನ್ಸೂರೆನ್ಸ್ ಫೆಡರೇಶನ್ ಆಫ್ ಇಂಡಿಯಾದ 50 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಜ.22ರಂದು ಉಡುಪಿ ಡಿವಿಜನ್ ಕೌನ್ಸಿಲ್ ನೇತೃತ್ವದಲ್ಲಿ ಸುವರ್ಣ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಉಡುಪಿ ಡಿವಿಜನ್ ಕೌನ್ಸಿಲ್ ಅಧ್ಯಕ್ಷ ಮುರಳೀಧರ್ ಡಿ.ವಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಫೆಡರೇಶನ್‌ನ ಕೇಂದ್ರೀಯ ಅಧ್ಯಕ್ಷ ಡಿ.ಎಸ್. ಶುಕ್ಲಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರೆನಲ್ ಕೌನ್ಸಿಲ್ ಅಧ್ಯಕ್ಷ ಎಚ್.ಎಸ್. ಶರಣಪ್ಪ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಲೀಲಾವತಿ ಕೆ., ಕಾಶೀನಾಥ್ ಪುತ್ರನ್, ರಾಮ ಅಮೀನ್ ಪಚ್ಚನಾಡಿ ಉಪಸ್ಥಿತರಿದ್ದರು.


ಪುನಃಪ್ರತಿಷ್ಠೆ ಸಂಪನ್ನ
ಉಡುಪಿ, ಜ.21: ನಗರದ ರಥಬೀದಿಯಲ್ಲಿರುವ ಮಹತೋಭಾರ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ಸುಮಾರು 200ವರ್ಷಗಳ ನಂತರದಲ್ಲಿ ಜೀರ್ಣೋದ್ಧಾರ ಸಹಿತ ಪುನಃಪ್ರತಿಷ್ಠೆಯು ಪರ್ಯಾಯ ಕಾಣಿಯೂರು ಶ್ರೀಗಳ ಹಾಗೂ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಉಪಸ್ಥಿತಿಯಲ್ಲಿ ವೇ.ಮೂ. ಪುತ್ತೂರು ಶ್ರೀನಿವಾಸ ತಂತ್ರಿ ಹಾಗೂ ಶಶಿಧರ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು. ವೇದಮೂರ್ತಿ ಹರಿಕೃಷ್ಣತಂತ್ರಿ ಬ್ರಹ್ಮಕಲಶೋತ್ಸವದ ಮಹತ್ವವನ್ನು ವಿವರಿಸಿದರು. ಶಿಬರೂರು ವೇದವ್ಯಾಸ ತಂತ್ರಿ, ಪಂಜ ಭಾಸ್ಕರ ಭಟ್, ಮಧುಸೂಧನ ತಂತ್ರಿ, ಹರಿಕೃಷ್ಣತಂತ್ರಿ, ಶ್ರೀವೇದವ್ಯಾಸ ಐತಾಳ್, ಹರಿಐತಾಳ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ಮಾಹಿತಿ ತಂತ್ರಜ್ಞಾನ ಸ್ಪರ್ಧೆ
ಮುಲ್ಕಿ, ಜ.21: ಮುಲ್ಕಿಯ ವಿಜಯ ಕಾಲೇಜಿನ ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ಜ.23ರಂದು ವಿಜಯ ಕಾಲೇಜಿನಲ್ಲಿ ಅಂತರ್ ಪ್ರೌಢಶಾಲಾ ಮಾಹಿತಿ ತಂತ್ರಜ್ಞಾನ ಸ್ಪರ್ಧೆ ವಿಜಿತ್-2ಕೆ16’’ ಜರಗಲಿದೆ.
ಬೆಳಗ್ಗೆ ಕಾರ್ಯಕ್ರಮವನ್ನು ಮುಲ್ಕಿಯ ವಿಜಯ ಕಾಲೇಜಿನ ಟ್ರಸ್ಟಿ ಯು. ನಾಗೇಶ್ ಶೆಣೈ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಕೆ. ಆರ್. ಶಂಕರ್ ವಹಿಸಲಿದ್ದಾರೆ. ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ವಿಜಯ ಕಾಲೇಜಿನ ಟ್ರಸ್ಟಿ ಸಿ.ಎ. ಶಿವರಾಮ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಮಣಿಪಾಲ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಚ್. ಶಾಂತರಾಮ್ ವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.


28ರಂದು ಕುಟುಂಬ ಸಂಗಮ
ಕಾಸರಗೋಡು, ಜ.21: ತೈಮ್ಮರ್ ಅಬ್ದುಲ್ಲ ಸ್ಮಾರಕ ೌಂಡೇಶನ್‌ನ ಆಶ್ರಯದಲ್ಲಿ ಸೀತಾಂಗೋಳಿ ಎ.ಬಿ.ಎ. ಸಭಾಂಗಣದಲ್ಲಿ ಜ. 28ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಹತ್ತು ತಲೆಮಾರಿನ ಕುಟುಂಬ ಸಂಗಮ ನಡೆಯಲಿದೆ. ಪಾನಕ್ಕಾಡ್ ಸಯ್ಯಿದ್ ರಶೀದಲಿ ಶಿಹಾಬ್ ತಂಳ್ ಉದ್ಘಾಟಿಸುವರು. ಇಬ್ರಾಹಿಂ ಮುಂಡ್ಯತ್ತಡ್ಕ ಅಧ್ಯಕ್ಷತೆ ವಹಿಸುವರು. ಎಂ. ಅಬ್ದುಲ್ಲ ಮುಗು ವರದಿ ಮಂಡಿಸುವರು. ಶಾಸಕ ಪಿ. ಬಿ. ಅಬ್ದುಲ್ ರಝಾಕ್, ಟಿ. ಎ. ಮೂಸ ಉಪ್ಪಳ ಕನ್ನಡ ಬುಲೆಟಿನ್ ಬಿಡುಗಡೆಗೊಳಿಸುವರು. 11ಗಂಟೆಗೆ ಕೌಟುಂಬಿಕ ಸಂಬಂಧಗಳ ಮಹತ್ವ ಎಂಬ ವಿಷಯದಲ್ಲಿ ಅಬ್ದುಲ್ ಸಮದ್ ಪೂಕೋಟ್ಟೂರುಮಾತನಾಡುತ್ತಾರೆ. 3.30ಕ್ಕೆ ಸಮಾರೋಪ ಸಮಾರಂಭ ಜರಗಲಿದ್ದು, ಪಿಣಂಗೋಡು ಅಬೂಬಕ್ಕರ್ ಮುಸ್ಲಿಯಾರ್ ಭಾಷಣಗೈಯ್ಯುವರು.


ಶಶಿಧರ ಕೋಟ್ಯಾನ್‌ಗೆ ಪಿಎಚ್‌ಡಿ 
ಮಂಗಳೂರು,ಜ.21: ಬಜ್ಪೆ ಕೊಳಂಬೆಯ ತಲ್ಲದಬೈಲು ದಿ. ಮೇಚ ಪೂಜಾರಿ-ವೀರಮ್ಮ ದಂಪತಿಯ ಪುತ್ರ ಶಶಿಧರ ಎಂ.ಕೋಟ್ಯಾನ್ ಎನ್.ಐ.ಟಿ.ಕೆ. ಸುರತ್ಕಲ್‌ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಿಂದ ಪಿಎಚ್‌ಡಿ ಪದವಿ ಗಳಿಸಿದ್ದಾರೆ. ಪ್ರಾಧ್ಯಾಪಕ ಡಾ. ಕೆ.ಎನ್. ಶುಭಾಂಗ ಮಾರ್ಗದರ್ಶನ ನೀಡಿದ್ದರು.


ರೈತರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಧರಣಿ
ಬೆಳ್ತಂಗಡಿ, ಜ.21: ರೈತರ ಸಮಸ್ಯೆಗಳನ್ನು ಪರಿಹರಿಸಿ ರೈತರ ರಕ್ಷಣೆಗೆ ಮುಂದಾಗಲು ಆಗ್ರಹಿಸಿ ಸಿಪಿಎಂ, ಎ.ಐ.ಕೆ.ಎಸ್. ಮತ್ತು ಸಿಐಟಿಯು ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು. ಈ ಸಂದರ್ಭ ಸಿಪಿಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್, ಸಿಐಟಿಯು ಮುಖಂಡರಾದ ಜಯರಾಮ ಮಯ್ಯ, ನೆಬಿಸಾ, ರೋಹಿಣಿ, ರೈತ ಮುಖಂಡರಾದ ಶ್ಯಾಮರಾಜ್, ಆದಿವಾಸಿ ಸಂಘಟನೆಯ ಮುಖಂಡರಾದ ವಸಂತ ನಡ, ಜಯಾನಂದ ಎಂ.ಕೆ., ವಿಠಲ ಮಲೆಕುಡಿಯ, ದಲಿತ ಹಕ್ಕು ಸಮಿತಿಯ ಮುಖಂಡರಾದ ಈಶ್ವರಿ ಪದ್ಮುಂಜ, ಬಾಬು ಯು. ಕೊಯ್ಯೂರು ಮೊದಲಾದವರು ಉಪಸ್ಥಿತರಿದ್ದರು. ಬೀಡಿನಗುಡ್ಡೆಯಲ್ಲಿ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಉಡುಪಿ ಜ.21: ಈ ಬಾರಿಯ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವವನ್ನು ಬೀಡಿನಗುಡ್ಡೆಯ ರಂಗಮಂದಿರದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ತಿಳಿಸಿದ್ದಾರೆ. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾದ ಗಣರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಡಾ.ವಿಶಾಲ್ ಆರ್. ಜ.26ರಂದು ಅರ್ಥಪೂರ್ಣವಾಗಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆ ಸಂಬಂಧ ಅಧಿಕಾರಿಗಳಿಗೆ ಸೂಕ್ತ ಮಾರ್ಗ ದರ್ಶನಗಳನ್ನು ನೀಡಿದರು.ರಾಜ್ಯೋತ್ಸವ ಆಚರಣೆ ವೇಳೆ ಸರ್ವೋತ್ತಮ ಪ್ರಶಸ್ತಿಗಳನ್ನು ಆರು ಮಂದಿ ಸರಕಾರಿ ನೌಕರರಿಗೆ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಗರಿಷ್ಠ ನಾಲ್ಕು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


ಬೀಚ್ ಉತ್ಸವ 2015-16 ನೃತ್ಯ ಸ್ಪರ್ಧೆ
  ಮಂಗಳೂರು, ಜ,21: ಕರಾವಳಿ ಬೀಚ್ ಉತ್ಸವವು ಜ.30 ಮತ್ತು 31ರಂದು ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ. ಇದರ ಅಂಗವಾಗಿ ನೃತ್ಯ ಸ್ಪರ್ಧೆಯು ನಡೆಯಲಿದ್ದು, ಈ ಪ್ರಯುಕ್ತ ಜ. 25ರಂದು ಬೆಳಗ್ಗೆ 8:30ರಿಂದ ಮಂಗಳೂರು ಪುರಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೆಸರು ನೋಂದಾಯಿಸಲು ಇಚ್ಚಿಸುವವರು ತಮ್ಮ ಗ್ರೂಪ್ ಹೆಸರು, ಸಂಪರ್ಕ ವರಗಳನ್ನು ಚ್ಞಞಚ್ಠ್ಟಿಚಿಛಿಚ್ಚಜ್ಛಛಿಠಿಜಿಚ್ಝಃಜಞಜ್ಝಿ.್ಚಟಞಗೆ ಇಮೇಲ್ ಮೂಲಕ ಜ.24ರ ಸಂಜೆ 5ರೊಳಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಯತೀಶ್ ಬೈಕಂಪಾಡಿ ದೂ. 9449035570, ಸುಹಾನ್ ಕುಮಾರ್ ದೂ. 9535623658 ಸಂಪರ್ಕಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಪ್ರಕಟನೆೆ ತಿಳಿಸಿದೆ.

ಸಚಿವ ಸೊರಕೆ ಪ್ರವಾಸ
ಉಡುಪಿ, ಜ.21: ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಜ.24ರವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
 ಜ.22ರಂದು ಬೆಳಗ್ಗೆ 8ಕ್ಕೆ ಉಡುಪಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ, 10ಕ್ಕೆ ಕುಂದಾಪುರ ಉಳ್ತೂರಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ಉದ್ಘಾಟನೆ, ಅಪರಾಹ್ನ 12ಕ್ಕೆ ಕಾಪು ರಾಜೀವ ಭವನದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ, ಅಪರಾಹ್ನ 3ಕ್ಕೆ ಮಲ್ಲಾರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಜ.23ರಂದು ಬೆಳಗ್ಗೆ 8ಕ್ಕೆ ಹಿರಿಯಡಕ ಶಾಸಕರ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ, ಸಂಜೆ 7ಕ್ಕೆ ಮೂಡಬಿದಿರೆಯಲ್ಲಿ ಕೋಟಿ-ಚೆನ್ನಯ ಜೋಡುಕೆರೆ ಕಂಬಳ. ಜ.24ರಂದು ಬೆಳಗ್ಗೆ 8ಕ್ಕೆ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ, 9ಕ್ಕೆ ಕುಕ್ಕಿಕಟ್ಟೆ ಇಂದಿರಾ ನಗರ ಶಾಲೆಯ ಬಳಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಸಮುದಾಯ ಭವನಕ್ಕೆ ಶಿಲಾನ್ಯಾಸ, 10ಕ್ಕೆ ಫಲಿಮಾರಿನಲ್ಲಿ ಕಾರ್ಯಕ್ರಮ, 11ಕ್ಕೆ ಶಿರ್ವದಲ್ಲಿ, ಅಪರಾಹ್ನ 12ಕ್ಕೆ ಎಲ್ಲೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.


ಪದಾಧಿಕಾರಿಗಳ ಆಯ್ಕೆ
 ವಿಟ್ಲ,ಜ.21: ಮಾರ್ನಮಿಗುಡ್ಡೆಯ ಅನ್ಸಾರುಲ್ ಇಸ್ಲಾಮ್ ಕಮಿಟಿ, ಸಿರಾಜುಲ್ ಹುದಾ ಮದ್ರಸದ ಮಹಾಸಭೆಯು ಇತ್ತೀಚೆಗೆ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಎಲ್. ಉಮರ್ ದಾರಿಮಿ, ಅಧ್ಯಕ್ಷರಾಗಿ ಅಬ್ದುಲ್ಲ ನೀರಕ್ಕಣಿ, ಉಪಾಧ್ಯಕ್ಷರಾಗಿ ಅಬೂಬಕರ್ ಜೋಗಿಮಠ, ಕಾರ್ಯದರ್ಶಿಯಾಗಿ ರಶೀದ್ ನೆತ್ರಕೆರೆ, ಜೊತೆ ಕಾರ್ಯದರ್ಶಿಯಾಗಿ ಶಂಸುದ್ದೀನ್ ಸೆರಂತಿಮಠ, ಕೋಶಾಧಿಕಾರಿಯಾಗಿ ಶಾಫಿಗಮಿ, ಮದ್ರಸ ಉಸ್ತುವಾರಿವಾಗಿ ಅಬೂಬಕ್ಕರ್ ಗಮಿ, ಮೊಯ್ದಿನ್ ಕುಂಞಿ ನೆಕ್ಕರೆಕಾಡು,ಆಯ್ಕೆಯಾಗಿದ್ದಾರೆ.


ನಾಳೆಯಿಂದ ‘ಕಲೋಪಾಸನಾ-2016’ ಸಾಂಸ್ಕೃತಿಕ ಕಲಾ ಸಂಭ್ರಮ
  ಪುತ್ತೂರು, ಜ.21: ಪುತ್ತೂರಿನ ಎಸ್‌ಡಿಪಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್‌ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್ ಪ್ರಾಯೋಜಕತ್ವದಲ್ಲಿ ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್ ಆವರಣದಲ್ಲಿ ಜ.23ರಿಂದ 25ರ ತನಕ ‘ಕಲೋಪಾಸನಾ-2016’ ಸಾಂಸ್ಕೃತಿಕ ಕಲಾ ಸಂಭ್ರಮ ನಡೆಯಲಿದೆ ಎಂದು ಸೆಂಟರ್‌ನ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಜ.23ರಂದು ಸಂಜೆ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಉದ್ಘಾಟಿಸಲಿದ್ದಾರೆ. ಬಳಿಕ ವಿದುಷಿ ರಂಜನಿ ಗಾಯತ್ರಿ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಜ.24ರಂದು ಸಂಜೆ ಶಿಜಿತ್ ನಂಬಿಯಾರ್ ಮತ್ತು ಪಾರ್ವತಿ ಮೆನನ್ ಚೆನ್ನೈ ಅವರಿಂದ ಭರತನಾಟ್ಯ ನಡೆಯಲಿದೆ. ಜ25ರಂದು ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಕೊಂಡದಕುಳಿ ಇವರಿಂದ ‘ಶ್ರೀರಾಮ ಪಟ್ಟಾಭಿಷೇಕ’ ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್, ರೂಪಲೇಖಾ ಮತ್ತು ಪಶುಪತಿ ಶರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News