ಹಜ್‌ಯಾತ್ರೆ ಫಾರಂ ಬಿಡುಗಡೆ ಅರ್ಜಿ
Update: 2016-01-21 23:22 IST
ಉಡುಪಿ, ಜ.21: ಈ ಸಾಲಿನ ಹಜ್‌ಯಾತ್ರೆಯ ಅರ್ಜಿ ಫಾರಂ ಬಿಡುಗಡೆ ಕಾರ್ಯ ಕ್ರಮ ಇತ್ತೀಚೆಗೆ ಕಡಿಯಾಳಿ ಯಲ್ಲಿರುವ ದಾರುಲ್ ಹುದಾ ಗೈಡೆನ್ಸ್ ಸೆಂಟರ್‌ನಲ್ಲಿ ಜರಗಿತು.ಹಜ್ ಫಾರಂನ್ನು ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಯಹ್ಯಾ ನಕ್ವಾ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಣಿಪಾಲ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ತಾಪಂ ಸದಸ್ಯ ರಹಮತುಲ್ಲಾ, ಉದ್ಯಮಿಗಳಾದ ಸಲೀಂ, ಜಮಾಲ್, ಅಮೀರ್ ಹಂಝ,ಉಡುಪಿ ಜಾಮಿಯ ಮಸೀದಿಯ ಕಾರ್ಯದರ್ಶಿ ಖಲೀಲ್, ಜಮಾಅತೆ ಇಸ್ಲಾಮೀಹಿಂದ್‌ನ ಮುಹಮ್ಮದ್ ಮರಕಡ, ರಿಝ್ವಾನ್, ಬಿ.ಕೆ.ಹಸನ್ ಉಪಸ್ಥಿತರಿದ್ದರು. ಈ ಫಾರಂಗಳು ಉಡುಪಿ ವಕ್ಫ್ ಬೋರ್ಡ್ ಕಚೇರಿ, ದಾರುಲ್ ಹುದಾ ಕಚೇರಿ, ಕಾಪುವಿನ ಅಮೀರ್ ಹಂಝರಲ್ಲಿ ಲಭ್ಯ ಇವೆ.