ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ: ಪ್ರವೀಣ್ ಕಲ್ಬಾವಿ
ಕೊಣಾಜೆ, ಜ.21: ಭಾರತ ದೇಶದ ಎಲ್ಲಾ ಮಲ್ಟಿ ಕಂಪೆನಿ ಉದ್ಯಮವು ಕಂಪ್ಯೂಟರ್ ಅಂತರ್ಜಾಲ ಮತ್ತು ಚಲನಶೀಲತೆಯನ್ನು ಅವಲಂಬಿಸಿದ್ದು, ಆಂಡ್ರಾಯ್ಡಾ ಕ್ಷೇತ್ರದಲ್ಲಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನೂತನ ಆವಿಷ್ಕಾರ ಮಾಡಲು ವಿಪುಲ ಅವಕಾಶಗಳಿವೆ ಎಂದು ಮಂಗಳೂರು ನೋವಿಗೋ ಸೊಲ್ಯೂಷನ್ಸ್‌ನ ಮುಖ್ಯಾಧಿಕಾರಿ ಮತ್ತು ನಿರ್ದೇಶಕ ಪ್ರವೀಣ್ ಕಲ್ಬಾವಿ ಹೇಳಿದರು.
ಅವರು ಕೊಣಾಜೆ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಡಿಪಾರ್ಟ್‌ಮೆಂಟ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಲಾದ ‘ಇಂಟರ್ನ್‌ಶಿಪ್ ಪ್ರೋಗ್ರಾಂ ಆನ್ ಆಂಡ್ರಾಯ್ಡಾ ಅಪ್ಲಿಕೇಶನ್ ಡೆವಲಪ್‌ಮೆಂಟ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾಯಕ್ರಮದಲ್ಲಿ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಬ್ಯುಸಿನೆಸ್ ಡೆವಲಪ್‌ಮೆಂಟ್ ವಿಭಾಗದ ನಿರ್ದೇಶಕ ಶಿಹಾಬ್ ಕಲಂದರ್, ಮುಖ್ಯಸ್ಥರಾದ ಅಬ್ದುಲ್ಲಾ ಇಬ್ರಾಹೀಂ ಪಿ.ಎ., ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಉಪ ಪ್ರಾಂಶುಪಾಲ ಡಾ.ರಮೀಝ್‌ಎಂ.ಕೆ., ಕಂಪ್ಯೂಟರ್ ಸಯನ್ಸ್ ವಿಭಾಗದ ಮುಖ್ಯಸ್ಥೆ ಡಾ.ಶರ್ಮಿಳಾ,ಅಕಾಡಮಿಕ್ಸ್ ವಿಭಾಗದ ನಿರ್ದೇಶಕ ಪ್ರೊ.ಸರ್ಫಾಝ್ ಹಾಶಿಮ್ ಉಪಸ್ಥಿತರಿದ್ದರು.ಶಶಾಂಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.