ಸರಕಾರದ ನಿರ್ಲಕ್ಷದಿಂದ ಕುಮ್ಕಿ ಸೌಲಭ್ಯ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ: ಆರೋಪ
Update: 2016-01-21 23:35 IST
ಮಂಗಳೂರು, ಜ.21: ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕುಮ್ಕಿ ಜಾಗ ರೈತರಿಗೆ ಕೊಡುವುದಾಗಿ ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಕಾಂಗ್ರೆಸ್ ಸರಕಾರದ ನಿರ್ಲಕ್ಷದಿಂದ ರೈತರು ಕುಮ್ಕಿ ಹಕ್ಕು ಕಳಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಕೈಗೊಂಡ ನಿರ್ಣಯವನ್ನು ಬಳಿಕ ಕಾಂಗ್ರೆಸ್ ಸರಕಾರಕ್ಕೆ ಜಾರಿಗೊಳಿಸಲು ಅವಕಾಶವಿತ್ತು. ಆದರೆ ರಾಜ್ಯದ ಕಂದಾಯ ಸಚಿವರೇ ಸರಕಾರಿ ನಿವೇಶನದ ಕೊರತೆಯಿರುವ ಕಾರಣ ಕುಮ್ಕಿ ಹಕ್ಕು ನೀಡಲು ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ನ್ಯಾಯಾಲಯದ ಆದೇಶದಿಂದ ರೈತರು ಆತಂಕಕ್ಕೀಡಾಗಿದ್ದಾರೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.