×
Ad

ಪಠಾಣ್‌ಕೋಟ್ ದಾಳಿ ಪ್ರಕರಣ: ಪಂಜಾಬಿನ ಆರು ಕಡೆ ಎನ್‌ಐಎ ದಾಳಿ

Update: 2016-01-21 23:42 IST

 ಹೊಸದಿಲ್ಲಿ.ಜ.21: ಜ.2ರಂದು ಪಠಾಣ್‌ಕೋಟ್ ವಾಯುಪಡೆಯ ವಾಯುನೆಲೆಯ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ಕುರಿತು ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಅಧಿಕಾರಿಗಳು ಗುರುವಾರ ಪಂಜಾಬಿನ ಗುರುದಾಸಪುರ ಮತ್ತು ಅಮೃತಸರ ನಗರಗಳ ಆರು ಕಡೆಗಳಲ್ಲಿ ದಾಳಿಗಳನ್ನು ನಡೆಸಿದ್ದಾರೆ.
 ದಾಳಿಗೊಳಗಾದ ಸ್ಥಳಗಳಲ್ಲಿ ವಾಯುನೆಲೆಯ ಮೇಲೆ ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದರೆನ್ನಲಾದ ಆಗ ಗುರುದಾಸಪುರ ಎಸ್ಪಿಯಾಗಿದ್ದ ಸಲ್ವಿಂದರ್ ಸಿಂಗ್, ಅವರ ಸ್ನೇಹಿತ ಆಭರಣ ವ್ಯಾಪಾರಿ ರಾಜೇಶ ವರ್ಮಾ ಮತ್ತು ಅವರ ಅಡುಗೆಯಾಳು ಮದನಗೋಪಾಲ್ ಅವರ ನಿವಾಸಗಳು ಸೇರಿವೆ
ಮಂಗಳವಾರ ಸಲ್ವಿಂದರ್ ಸಿಂಗ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲಾಗಿತ್ತು. ಗುರುದಾಸಪುರದಲ್ಲಿ ನಾಲ್ಕು ಕಡೆ ಮತ್ತು ಅಮೃತಸರದಲ್ಲಿ ಎರಡು ಕಡೆ ದಾಳಿಗಳನ್ನು ನಡೆಸಲಾಗಿದೆ.
ಸಿಂಗ್ ಹಾಲಿ 75ನೆ ಪಂಜಾಬ್ ಸಶಸ್ತ್ರ ಪೊಲೀಸ್ ಪಡೆಯ ಸಹಾಯಕ ಕಮಾಂಡಂಟ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News