×
Ad

ಕರ್ಣಾಟಕ ಬ್ಯಾಂಕ್‌ಗೆ ಎಂಎಸ್‌ಎಂಇ ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Update: 2016-01-21 23:55 IST

ಮಂಗಳೂರು, ಜ.21: ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಹಾಗೂ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಯನ್ನು ಹೊಂದಿರುವ ಕರ್ಣಾಟಕ ಬ್ಯಾಂಕ್, ಹೊಸದಿಲ್ಲಿಯ ಚೇಂಬರ್ ಆಫ್ ಇಂಡಿಯನ್ ಮೈಕ್ರೋ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್ ಪ್ರೈಸಸ್ (ಸಿಐಎಂಎಸ್‌ಎಂಇ)ನಿಂದ ‘ಎಂಎಸ್‌ಎಂಇ ಬ್ಯಾಂಕಿಂಗ್ ಶ್ರೇಷ್ಠತಾ ಪುರಸ್ಕಾರ 2015’ರ ‘ಇಕೋಟೆಕ್ ಸೇವಿ ಬ್ಯಾಂಕ್ ಫೋರ್ ಎಮ ರ್ಜಿಂಗ್ ಬ್ಯಾಂಕ್’ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಹೊಸದಿಲ್ಲಿಯಲ್ಲಿ ಇತ್ತೀಚೆಗೆ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಚಂದ್ರಶೇಖರ ರಾವ್ ಬಿ., ಕೇಂದ್ರದ ವಿದ್ಯುತ್, ಕಲ್ಲಿದ್ದಲು, ನೂತನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪಿಯುಶ್ ಗೋಯಲ್‌ರಿಂದ ಪ್ರಶಸ್ತಿ ಸ್ವೀಕರಿಸಿದರು.

ಎಂಎಸ್‌ಎಂಇ ಕ್ಷೇತ್ರದಲ್ಲಿ ಬ್ಯಾಂಕ್‌ನ ಪ್ರಯತ್ನ ವನ್ನು ಕೈಗಾರಿಕೆಗಳ ಸರ್ವೋನ್ನತ ಮಂಡಳಿಯಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸಲಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಜಯರಾಮ ಭಟ್, ‘ಎಂಎಸ್‌ಎಂಇ ಗ್ರಾಹಕರ ಬೇಡಿಕೆಗಳಿಗೆ ತಕ್ಕುದಾದ ಹಲವು ಉತ್ಪನ್ನಗಳನ್ನು ಬ್ಯಾಂಕ್ ಪರಿಚಯಿಸಿದೆ’ ಎಂದು ಹೇಳಿದ್ದಾರೆ. ಈ ಪ್ರಶಸ್ತಿಯು ಇನ್ನಷ್ಟು ಹೆಚ್ಚಿನ ಸೇವೆಯನ್ನು ಒದಗಿಸಲು ಪ್ರೇರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News