ಜಿಪಂ-ತಾಪಂ ಚುನಾವಣೆ: ನಿಯಂತ್ರಣ ಕೊಠಡಿ ಕಾರ್ಯಾರಂಭ
Update: 2016-01-22 00:01 IST
ಉಡುಪಿ, ಜ.21: ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಜಿಪಂ/ತಾಪಂ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದೂರವಾಣಿ ಮೂಲಕ ದಾಖಲಿಸಲು ಅನುಕೂಲವಾಗುವಂತೆ ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.
ಮಣಿಪಾಲದ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ- 1077, ದೂಸಂ.-0820-2574802, ತಾಲೂಕು ಕಚೇರಿ ಕುಂದಾಪುರ ದೂ.- 08254-235567, ತಾಲೂಕು ಕಚೇರಿ ಉಡುಪಿ -0820-2521198, ತಾಲೂಕು ಕಚೇರಿ ಕಾರ್ಕಳ- 08258-230057. ಈ ದೂರವಾಣಿ ಸಂಖ್ಯೆ ಗಳನ್ನು ಸಂಪರ್ಕಿಸಿ ದೂರು, ಮಾಹಿತಿ ನೀಡಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.