×
Ad

ಉಡುಪಿ ತಲುಪಿದ ಧನ್ವಂತರಿ ಆಯುರ್ ಜ್ಯೋತಿ ರಥಯಾತ್ರೆ

Update: 2016-01-22 00:06 IST

ಉಡುಪಿ, ಜ.21: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಭಾರತೀಯ ವೈದ್ಯ ಪದ್ಧತಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಧನ್ವಂತರಿ ಆಯುರ್ ಜ್ಯೋತಿ ರಥಯಾತ್ರೆ ಇಂದು ಉಡುಪಿಗೆ ಆಗಮಿಸಿತು.
ಅಂಬಾಗಿಲಿನಲ್ಲಿ ರಥಯಾತ್ರೆಯನ್ನು ಸ್ವಾಗತಿಸಲಾ ಯಿತು. ಈ ವೇಳೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ, ಉದ್ಯಾವರದ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ಜಿಲ್ಲಾ ಆಯುಷ್ ಸಂಸ್ಥೆಗಳ ಅಧ್ಯಕ್ಷ ಡಾ.ಅಂಚನ್, ಡಾ.ತನ್ಮಯ್ ಗೋಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ರಥಯಾತ್ರೆಯೊಂದಿಗೆ ನಗರದಲ್ಲಿ ಆಯುಷ್ ಪದ್ಧತಿಯ ವೈದ್ಯರು ಮತ್ತು ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News