×
Ad

ರಾಜಧಾನಿಯಲ್ಲಿ ದಟ್ಟಮಂಜು: ಸಂಚಾರಕ್ಕೆ ಅಡ್ಡಿ

Update: 2016-01-22 09:07 IST

ನವದೆಹಲಿ: ಶುಕ್ರವಾರ ಮುಂಜಾನೆ ನಗರದಲ್ಲಿ ದಟ್ಟಮಂಜು ಆವರಿಸಿದ್ದರಿಂದ ವಿಮಾನ ಹಾಗೂ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಸಾಮಾನ್ಯ ಜನಜೀವನಕ್ಕೆ ಅಡ್ಡಿ ಉಂಟಾಯಿತು.

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಕೇವಲ 50 ಮೀಟರ್ ಅಂತರವನ್ನಷ್ಟೇ ನೋಡಲು ಸಾಧ್ಯವಾಗುತ್ತಿತ್ತು. ಈ ಕಾರಣದಿಂದ ನಿಲ್ದಾಣಕ್ಕೆ ಆಗಮಿಸುವ ಹಾಗೂ ಇಲ್ಲಿಂದ ನಿರ್ಮಮಿಸುವ ಎಲ್ಲ ವಿಮಾನಗಳನ್ನು ಮುಂಜಾನೆ 6ರ ಬಳಿಕ ತಡೆ ಹಿಡಿಯಲಾಗಿದೆ ಎಂದು ಮೂಲಗಳು ಹೇಳಿವೆ. 40ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲೂ ವಿಳಂಬವಾಗಿದೆ.
ರಾಜಧಾನಿಯಲ್ಲಿ ನಡುಗುವ ಚಳಿ ಜನರನ್ನು ಕಂಗೆಡಿಸಿದ್ದು, ಉಷ್ಣತೆ 6.9 ಡಿಗ್ರಿಗೆ ಕುಸಿದಿದೆ.

ಇದು ಈ ಅವಧಿಯ ಸರಾಸರಿಗಿಂತ ಕಡಿಮೆ. ಗರಿಷ್ಠ ಉಷ್ಣಾಂಶ ಕೂಡಾ 17.3 ಡಿಗ್ರಿಗೆ ಇಳಿದಿದ್ದು, ಇದು ಕೂಡಾ ಸರಾಸರಿಗಿಂತ ಕಡಿಮೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ. ಉತ್ತರ ಭಾರತದಾದ್ಯಂತ ಚಳಿ ನಡುಗಿಸುತ್ತಿದ್ದು, ಜಮ್ಮು ಕಾಶ್ಮೀರದ ಲಡಾಖ್ ಪ್ರೇಶದ ಕಾರ್ಗಿಲ್‌ನಲ್ಲಿ ಅತ್ಯಂತ ಕನಿಷ್ಠ ಎಂದರೆ ಮೈಸನ್ 16.4 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News