×
Ad

ಜ.24ರಂದು ರಾಜ್ಯ ಮಟ್ಟದ ಕೇರಳ ಯಾತ್ರೆ

Update: 2016-01-22 12:17 IST

ಕಾಸರಗೋಡು : ಸೌಹಾರ್ದತೆ, ಸಮಾನತೆ , ಐಕ್ಯತೆ ಎಂಬ ಘೋಷಣೆಯೊಂದಿಗೆ ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ  ಹಾಗೂ ರಾಜ್ಯ ಕೈಗಾರಿಕಾ ಸಚಿವ ಪಿ. ಕೆ  ಕುನ್ಚಾಲಿಕುಟ್ಟಿ ಯವರ  ನೇತ್ರತ್ವದಲ್ಲಿ  ರಾಜ್ಯ ಮಟ್ಟದ     ಕೇರಳ ಯಾತ್ರೆ  ಜನವರಿ 24 ರಂದು  ಮಂಜೇಶ್ವರ  ಹೊಸಂಗಡಿಯಿಂದ  ಪ್ರಯಾಣ ಬೆಳಸಲಿದೆ.

ಅಂದು  ಸಂಜೆ ಮೂರು ಗಂಟೆಗೆ ಹೊಸಂಗಡಿ ಯಲ್ಲಿ ನಡೆಯುವ  ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್  ಸಯ್ಯಿದ್   ಹೈದರಾಲಿ ಶಿಹಾಬ್ ತಂಗಲ್  ಯಾತ್ರೆಗೆ ಚಾಲನೆ ನೀಡುವರು  ಎಂದು ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ದ ಸಚಿವರಾದ ವಿ. ಕೆ ಇಬ್ರಾಹಿಂ ಕುನ್ಚಿ,  ಮನ್ಜಾಲಕುಯಿ ಅಲಿ,  ಪಿ. ಕೆ ಅಬ್ದು ರಬ್ , ಪಕ್ಸದ ಶಾಸಕರು  ಹಾಗೂ ರಾಷ್ಟ್ರೀಯ , ರಾಜ್ಯ , ಜಿಲ್ಲಾ ಮಟ್ಟದ ನಾಯಕರು ಉಪಸ್ಥಿತರಿರುವರು. 
೨೫ ರಂದು ಕಾಸರಗೋಡು , ಪಳ್ಳಿಕೆರೆ,  ಕಾನ್ಚಾ೦ಗಾಡ್, ತ್ರಿಕ್ಕರಿಪುರ  ಮೊದಲಾದೆಡೆ    ಸ್ವಾಗತ ನೀಡಲಾಗುವುದು. ರಾಜ್ಯದ  ೧೪೦ ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿರುವ ಯಾತ್ರೆ ಫೆಬ್ರವರಿ 11 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ , ಶಾಸಕ ಎನ್ .ಎ ನೆಲ್ಲಿಕುನ್ನು , ಎಂ .ಸಿ ಖಮರುದ್ದೀನ್ ,  ಟಿ  . ಇ  ಅಬ್ದುಲ್ಲ , ಎ ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News