NSUI ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ
Update: 2016-01-22 12:25 IST
ಮೂಡುಬಿದಿರೆ: ಮೂಡುಬಿದಿರೆ ತಾಲೂಕು NSUI(ವಿದ್ಯಾರ್ಥಿ ಕಾಂಗ್ರೆಸ್) ವತಿಯಿಂದ ಮಂಗಳವಾರ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
NSUI ಜಿಲ್ಲಾದ್ಯಕ್ಷ ಆಶಿತ್ ಜಿ ಪಿರೇರಾ, ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಮಿಥುನ್ ರೈ, ಮೂಡಬಿದ್ರೆ ಮುಲ್ಕಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಮೂಡಾ ಅದ್ಯಕ್ಷ ಸುರೇಶ್ ಕೋಟ್ಯಾನ್, ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷೆ ರೂಪಾ ಶೆಟ್ಟಿ, NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಜಿ ಇರ್ಷಾದ್, ಕಾರ್ಯದರ್ಶಿ ಸವದ್ ಗೋನಡ್ಕ, ಮೂಡಬಿದ್ರೆ NSUI ಪದಾಧಿಕಾರಿಗಳಾದ ರೂಪೇಶ್, ಗ್ಲೆನ್ ವಿಶಾಲ್, ಸಮ್ಯಕ್ ಜೈನ್, ನಾಗೇಶ್ ಪ್ರಭು, ಸುಶಾಂತ್, ಮುನವ್ವೀರ್, ನೈಲ್, ಉಬೈದುಲ್ಲಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.