×
Ad

ಮಡಿಕೇರಿ: ಪ್ರಿನ್ಸಿಪಲ್ ಆತ್ಮಹತ್ಯೆ ಕಿರುಕುಳ ಆರೋಪ

Update: 2016-01-22 14:14 IST

 ಮಡಿಕೇರಿಯ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪಿ.ಯು ಕಾಲೇಜಿನಲ್ಲಿನ
ಮೇಲ್ವರ್ಗದ ಜಾತಿಯ ಅಧ್ಯಕರು ,ಸದಸ್ಯರು ಕಿರುಕುಳ ನೀಡಿದ ಕಾರಣ ಆ ಕಾಲೇಜಿನ ಪ್ರಿನ್ಸಿಪಲ್ಸ್
ಆತ್ಮಹತ್ಯೆ ಮಾಡಿರುದಾಗಿ ಮ್ರುತರ ಸಂಬಂಧಿಕರು ಆರೋಪಿಸಿದ್ದಾರೆ.

ಎಸ್.ಸಿ.ಮುಗೇರಾ ಜಾತಿಗೆ ಸೇರಿದ ಸುದೇಶ್ ಅವರು ಮುಂಬಡ್ತಿಗೊಂಡು ಮಡಿಕೇರಿಯ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲ ವರ್ಷಗಳ ಹಿಂದೆ ನೇಮಕವಾಗಿದ್ರು, ಆ ಬಳಿಕ ಕಾಲೇಜಿನ ಮೇಲ್ವರ್ಗದ ಜಾತಿಯ ಅಧ್ಯಕರು , ಸದಸ್ಯರು ಕಿರುಕುಳ ನೀಡಿದ್ದು, ಸುದೇಶ್ ಅವರು ಖಿನ್ನತೆಗೊಳಗಾಗಿದ್ದರು.

ಈ ಬಗ್ಗೆ ಹಲವು ಬಾರಿ ಪತ್ನಿ, ಪತ್ನಿಯ ಸಹೋದರನಿಗೆ ಹಲವು ಬಾರಿ ತಿಳಿಸಿದ್ದರು.ಇದರಿಂದಾಗಿ ನೊಂದ ಅವರನ್ನು ಪತ್ನಿ ಸಮಧಾನಪಡಿಸಿದ್ದು ಜ.20ರಂದು ಕಾಲೇಜಿಗೆ ಹೋಗುದಾಗಿ ತಿಳಿಸಿ ಹೊಗಿದ್ದರು. ಆದರೆ ಕಾಲೇಜಿಗೆ ಹೋಗದ ಸುದೇಶ್ ಬಿಜೈ ಬಳಿಯ ಕೀರ್ತಿ ವಸತಿ ಮಹಲ್  ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ.  ಆತ್ಮಹತ್ಯೆ ಮಾಡುವ 2 ದಿನಗಳ ಮೊದಲು ಪತ್ನಿನಿಗೆ ಮೆಸೇಜೊಂದನ್ನು ಕಲಿಸಿದ್ದು, ತಾನು ಆತ್ಮಹತ್ಯೆ ಮಾಡುದಾಗಿ ತನ್ನನ್ನು ಕ್ಷಮಿಸುವಂತೆ ಹಾಗೂ ಮಕ್ಕಳನ್ನು ಚೆನ್ನಾಗಿ ನೋಡುವಂತೆ ಮೆಸೇಜ್ ಮಾಡಿದ್ದರು.
ಸಾವಿಗೆ ಕಾರಣರಾದ ಮೇಲ್ವರ್ಗದ ಜಾತಿಯ ಅಧ್ಯಕರು ,ಸದಸ್ಯರ ವಿರುಧ್ದ ಕ್ರಮಕೈಗೊಳ್ಳುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News