ಪ್ರತಿಭಾವಂತ ಅಖಿಲಾಗೆ “ನನ್ಮ ಮನೆ” ಪುರಸ್ಕಾರ
ಬೀದಿದೀಪದ ಮಂದ ಬೆಳಕಿನಲ್ಲಿ ಓದಿ ಪ್ಲಸ್ ಟು ನಲ್ಲಿ ಶೇ.92 ಪಡೆದ ಅಖಿಲ !
..
ಕಾಸರಗೋಡು: ನಾಡೊಂದರ ಸಂಪೂರ್ಣ ಪ್ರೀತಿ ಅಖಿಲ ಎಂಬ ವಿದ್ಯಾರ್ಥಿನಿಗೆ ಲಭಿಸಿತು. ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಓದಿ ಪ್ಲಸ್ ಟು (ದ್ವಿತೀಯ ಪಿಯುಸಿ)ಪರೀಕ್ಷೆಯಲ್ಲಿ ಉನ್ನತ ಮಾರ್ಕ್ ಪಡೆದು ಪಾಸಾದ ಅಖಿಲ ಎಂಬ ಪ್ರತಿಭಾವಂತ ಹುಡುಗಿಗೆ ಮನೆ ಮತ್ತು ಮನೆಜಾಗ ಸ್ವಂತವಾಗಿ ಸಿಗುವಾಗ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಸ್ಕೂಲ್ ಮತ್ತು ಇಡಿ ಊರಿಗೆ ಊರೇ ಸಂತೋಷ ಆಚರಿಸಿದೆ. ಅವಳಿಗೆ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಸ್ಕೂಲ್ ಕಟ್ಟಿಸಿಕೊಟ್ಟ "ನನ್ಮ"ಎಂಬ ಮನೆಯ ಕೀಲಿಕೈಯನ್ನು ಕಳೆದಿವಸ ಡಿಸಿವಿಎಸ್ ಮುಹಮ್ಮದ್ ಸಗೀರ್ ಹಸ್ತಾಂತರಿಸಿದ್ದಾರೆ. ಐದು ಲಕ್ಷ ರೂ ವೆಚ್ಚದಲ್ಲಿ ಶಾಲೆಯೇ ಮುಂದೆ ನಿಂತು ಜೊತೆಗೂಡಿ ಅಖಿಲಾಳಿಗೆ ಮನೆ ಕಟ್ಟಿಸಿಕೊಟ್ಟಿದೆ. ಕೊಳ್ಳತ್ತೂರು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಶೆಡ್‌ನಲ್ಲಿ ಹದಿನೇಳು ವರ್ಷಗಳಿಂದ ಅಖಿಲ ಮತ್ತು ಅವಳ ಕುಟುಂಬ ವಾಸಿಸುತ್ತಿತ್ತು. ತಂದೆ ಅಜಿತ್ ಅನಾರೋಗ್ಯದಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ತಾಯಿ ಲೀಲಾ, ಸಹೋದರಿಯರಾದ ಹತ್ತನೆ ತರಗತಿಯಲ್ಲಿ ಕಲಿಯುತ್ತಿರುವ ನಿಖಿಲಾ, ಐದನೆ ತರಗತಿಯಲ್ಲಿ ಕಲಿಯುತ್ತಿರುವ ಅನಘಾ ಮತ್ತು ಅಂಗನವಾಡಿಯಲ್ಲಿ ಕಲಿಯುವ ಅಶ್ವತಿ ಇವರೆಲ್ಲರಲ್ಲಿ ನಿರೀಕ್ಷೆ ತುಂಬಿ ಅಖಿಲಾ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾಳೆ.
ಎಂಟು ಸೆಂಟ್ಸ್ ಜಾಗ ಮತ್ತು 800 ಚದರ ಅಡಿ ವಿಸ್ತೀರ್ಣದ ತಾರಸಿ ಮನೆಯನ್ನು ಅಖಿಲಾಳಿಗೆ ನೀಡಲಾಗಿದ್ದು ಅವಳ ಕ್ಲಾಸ್ ಅಧ್ಯಾಪಕ ರತೀಶ್ ಪಿಲಿಕ್ಕೋಡ್ ಎಂಬವರ ಪರಿಶ್ರಮದಲ್ಲಿ ಹೈಸ್ಕೂಲ್, ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು, ಶಾಲಾ ಮ್ಯಾನೇಜ್‌ಮೆಂಟ್, ಪಿಡಿಎ, ಅಧ್ಯಾಪಕರು, ಹೆತ್ತವರು, ಹಳೆ ವಿದ್ಯಾರ್ಥಿಗಳು ಊರವರು ಸಂಪೂರ್ಣ ಸಹಕರಿಸಿ ಈ ಮನೆಯನ್ನು ಕಟ್ಟಲಾಗಿದೆ.
ರಸ್ತೆಬದಿಯ ಬೀದಿದೀಪದ ಮಂದ ಬೆಳಕಿನಲ್ಲಿ ಓದಿಯೂ ಅಖಿಲಾ ಪ್ಲಸ್ ಟು ಗೆ ಶೇ.92 ಅಂಕಗಳನ್ನು ಗಳಿಸಿದ್ದಳು.ಮನೆ ನಿರ್ಮಿಸಿಕೊಟ್ಟಿರುವ ಚಟ್ಟಂಚಾಲ್ ಹೈಯರ್ ಸೆಕಂಡರಿ ಸ್ಕೂಲ್‌ನ ಹಳೆವಿದ್ಯಾರ್ಥಿಯಾಗಿದ್ದು ಸದ್ಯ ರಾಜಪುರಂ ಸೇಂಟ್ ಪಯರ್ ಟೆನ್ತ್ ಕಾಲೇಜ್‌ನಲ್ಲಿ ಬಿಬಿಎ ಓದುತ್ತಿದ್ದಾಳೆ. ಮನೆ ಕಟ್ಟುವ ಕೆಲಸ ಪೂರ್ತಿಯಾದಾಗ ಉತ್ಸವದ ಸಂಭ್ರಮದಲ್ಲಿ ಊರಿಡೀ ಅಖಿಲಾಳ ಗೃಹ ಪ್ರವೇಶದಲ್ಲಿ ಭಾಗಿಯಾಯಿತು. ಊರಿನ ಸಮಾಜ ಸೇವಕರು ಮತ್ತು ಶಾಲೆಯ ಮ್ಯಾನೇಜ್ ಮೆಂಟ್ ಪ್ರಯತ್ನಿಸುವ ಮೂಲಕ ಅಖಿಲಾಳ ಕುಟುಂಬಕ್ಕೆ ಮನೆ ಸ್ಥಳ ಸಿಕ್ಕಿತ್ತು. ಶಾಲೆಯ ವಿದ್ಯಾರ್ಥಿಗಳು ಊರವರು ಸಮಾಜ ಸೇವಕರುಅಖಿಲಾ ಗೃಹ ಪ್ರವೇಶದಲ್ಲಿ ನೆರೆದಿದ್ದರು.