ಮೂಡುಬಿದಿರೆ: ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಯನಾ ವಿ.ರಮಣ್ ಡಿಸ್ಟಿಂಕ್ಷನ್,
Update: 2016-01-22 19:37 IST
ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2015 ನೇ ಸಾಲಿನಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಅಯನಾ ವಿ.ರಮಣ್ ಶೇ.92.75 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಹಿರಿಯ ಸಂಗೀತ ವಿದ್ವಾಂಸ ಎಂ.ನಾರಾಯಣ್ ಶಿಷ್ಯೆಯಾಗಿರುವ ಈಕೆ, ಮೂಡುಬಿದಿರೆಯ ಆಳ್ವಾಸ್ ಆಂಗ್ಲಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದು; ಸಾಂಸ್ಕೃತಿಕ ವಿಭಾಗದ ದತ್ತು ವಿದ್ಯಾರ್ಥಿಯಾಗಿದ್ದು, ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಪತ್ರಕರ್ತ, ಕಲಾವಿದ ಕೆ.ವಿ.ರಮಣ್ ಹಾಗೂ ಉಪನ್ಯಾಸಕಿ ಮುಕಾಂಬಿಕಾ.ಜಿ.ಎಸ್.ಪುತ್ರಿಯಾಗಿರುವ ಅಯನಾ ರಮಣ್ ಮನೆ ಮನೆಗೆ ಭರತನಾಟ್ಯ, ನಾಟ್ಯಾಯನದಂತಹ ನವೀನ ಪರಿಕಲ್ಪನೆಗಳ ಬಹುಮುಖ ಪ್ರತಿಭೆಯ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದ್ದಾರೆ.
ಸನಾತನ ನಾಟ್ಯಾಲಯದ ಶಾರದಾ ಮಣಿಶೇಖರ್ ಶಿಷ್ಯತ್ವದಲ್ಲಿ ಭರತನಾಟ್ಯದ ಸೀನಿಯರ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.