ಮಂಗಳೂರು : ರೋಹಿತ್ ಆತ್ಮಹತ್ಯೆ ಪ್ರಕರಣ:ಎನ್.ಐ.ಟಿ.ಕೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
Update: 2016-01-22 20:24 IST
ಮಂಗಳೂರು,ಜ.22:ಹೈದರಾಬಾದ್ ಕೇಂದ್ರಿಯ ವಿ ವಿ ಯ ಸಂಶೊಧನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಮುಖಂಡ ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಇಂದು ಸುರತ್ಕಲ್ ನ ಎನ್.ಐ.ಟಿ.ಕೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜಿನ ಮುಖ್ಯದ್ವಾರದ ಮುಂದೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ರೋಹಿತ್ ಸಾವಿಗೆ ಕಾರಣರಾದ ವ್ಯಕ್ತಿಗಳ ಬಂಧನ ಮಾಡಬೇಕೆಂದು ಆಗ್ರಹಿಸಿದರು. ವಿವಿಯೊಂದು ಸಂಶೋಧನಾ ವಿದ್ಯಾರ್ಥಿಯ ಸಾವಿಗೆ ಕಾರಣವಾಗಿರುವುದು ದುರಂತವಾಗಿದ್ದು ವಿದ್ಯಾರ್ಥಿಯೊಬ್ಬನ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಮನ್ನಣೆ ನೀಡದೆ ಅದನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ ಎಂದು ಆಪಾದಿಸಿದರು . ಈ ಪ್ರತಿಭಟನೆಯಲ್ಲಿ ಎನ್.ಐ.ಟಿ.ಕೆ ವಿದ್ಯಾರ್ಥಿಗಳು ,ಅಧ್ಯಾಪಕರು ಭಾಗವಹಿಸಿದ್ದರು.