×
Ad

ಮಂಗಳೂರು : ಅಂತರ್ ವಿವಿ ಯುವಜನೋತ್ಸವ ‘ವೇವ್ಸ್-2015

Update: 2016-01-22 21:38 IST

ಮಂಗಳೂರು ವಿವಿಯಲ್ಲಿ ನಡೆದ ಯುವಜನೋತ್ಸವ ಸ್ಪರ್ಧೆಯಲ್ಲಿ ತಿರುವನಂತಪುರದ ಯುನಿವರ್ಸಿಟಿ ಆಫ್ ಕೇರಳವು ಚಾಂಪಿಯನ್ ಆಗಿ ಹೊರಹೊಮ್ಮಿತು. 

ಕೊಣಾಜೆ : ಮಂಗಳೂರು ವಿಶ್ವವಿದ್ಯಾ ಲಯದಲ್ಲಿ ನಡೆದ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ ‘ವೇವ್ಸ್-2015 ಸ್ಪರ್ಧಾ ಕೂಟದಲ್ಲಿ ತಿರುವನಂತಪುರದ ಯುನಿವರ್ಸಿಟಿ ಆಫ್ ಕೇರಳ ವಿವಿಯು ಚಾಂಪಿಯನ್ ಆಗಿ ಹೊರಹೊಮ್ಮಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

  ಕೇರಳದ ಕೊಟ್ಟಾಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯ  ವು ರನ್ನರ್ ಆಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಎರಡು ತಂಡಗಳೂ ಫೆ. 15ರಿಂದ 19ರತನಕ ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅರ್ಹತಯನ್ನು ಗಳಿಸಿಕೊಂಡಿತು.


ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಅವರು, ಮಂಗಳೂರು ವಿವಿಯಲ್ಲಿ ಈಗಾಗಲೇ ಸಾಂಸ್ಕ್ರತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಇರುವ ನಿಧಿಯನ್ನು ಹೆಚ್ಚಿಸಲಾಗಿದೆ. ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡೆ ಸೇರಿದಂತೆ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮೀಸಲಾತಿ ಅವಕಾಶವನ್ನು ಕಲ್ಪಿಸಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಯುವಜನೋತ್ಸವದಂತಹ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಬೆಳೆಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಜೀವನದ ಯಾವ ರಂಗದಲ್ಲೂ ಯಶಸ್ಸನ್ನು ಗಳಿಸಲು ಸಾಧ್ಯ. ಆದ್ದರಿಂದ ಇಂತಹ ವೇದಿಕೆಯಲ್ಲಿ ಪಾಲುಪಡೆಯುವ ಅವಕಾಶಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ನುಡಿದರು.

ಕಳೆದ ಕೆಲವು ದಿನಗಳಿಂದ ತೈವಾನ್‌ನಲ್ಲಿ ನಡೆದ ಅಂತರಾಷ್ಟ್ರಿೀಯ ಸಮ್ಮೇಳನದ ವಿಷಯದಲ್ಲಿ ಭಾಗವಹಿಸುವ ಅನಿವಾರ್ಯತೆ ಇದ್ದುದರಿಂದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ ಸಮಾರೋಪದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಯುವಜನೋತ್ಸವ ಯಶಸ್ವಿಯಾಗಿ ಶ್ರಮಿಸಿದ ಎಲ್ಲರೂ ಮಂಗಳೂರು ವಿವಿಯ ಕೀರ್ತಿಯನ್ನು ಶಿಖರಕ್ಕೇರಸಿದ್ದಾರೆ ಎಂದು ಶ್ಲಾಘಿಸಿದರು.


 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ ಮುಖ್ಯ ವೀಕ್ಷಕ ಪ್ರೊ. ಅರುಣ್ ಪಾಟೀಲ್, ಪ್ರಶಸ್ತಿ ಪಡೆಯಲು ಅಾಧ್ಯವಾದ ತಂಡಗಳು ತಾವು ಸ್ಪರ್ಧಿಸಿದ ಕ್ಷೇತ್ರದಲ್ಲಿ ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡಬೇಕು.  
 
 ಯುವಜನೋತ್ಸವದ ಯಶಸ್ಸಿನಲ್ಲಿ ಮಂಗಳೂರು ವಿವಿಯ ಪಾತ್ರ ಪ್ರಮುಖವಾಗಿದೆ ಎಂದರು. ಮಂಗಳೂರು ವಿವಿ ಕುಲಸಚಿವ ಪ್ರೊ. ಟಿ.ಡಿ. ಕೆಂಪರಾಜು ಮಾತನಾಡಿದರು. ಟೀಂ ಲೀಡರ್‌ಗಳ ಪರವಾಗಿ ಕಲ್ಲಿಕೋಟೆ ವಿಶ್ವವಿದ್ಯಾಲಯದ ವತ್ಸಲರಾಜ್ ಹಾಗೂ ಮೈಸೂರು ವಿವಿಯ ಪ್ರೊ. ಗುರುಸಿದ್ದಯ್ಯ, ವಿದ್ಯಾರ್ಥಿಗಳ ಪರವಾಗಿ ಹೈದರಾಬಾದಿನ ಜವಾಹರ್‌ಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ ಎಂ.ಟೆಕ್ ವಿದ್ಯಾರ್ಥಿ ಉಮಾಶಂಕರ್, ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದ ಹರಿಕೃಷ್ಣನ್ ಮೆನನ್ ಮಂಗಳೂರು ವಿವಿ ಆಯೋಜಿಸಿದ ಯುವಜನೋತ್ಸವ ಹಾಗೂ ಮಂಗಳೂರು ವಿವಿಯ ಕಾರ್ಯವೈಖರಿ ಕೊಂಡಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿವಿಗಳ ಟೀಂ ಲೀಡರ್‌ಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ, ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಪ್ರೊ. ಪಿ.ಎಲ್. ಧರ್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿವಿ ಪ್ರಾಧ್ಯಾಪಕ ಪ್ರೊ. ರವಿಶಂಕರ್ ಕಾರ್ಯಕ್ರಮ ನಿರೂಪಿಸಿ ವಿಜೇತರ ಹೆಸರು ಘೋಷಿಸಿದರು. ಇತಿಹಾಸ ವಿಭಾಗ ಪ್ರಾಧ್ಯಾಪಕ ಪ್ರೊ. ಲೋಕೇಶ್ ವಂದಿಸಿದರು.

ವಿದ್ಯಾರ್ಥಿಗಳ ಶ್ರಮದಿಂದ ಪ್ರಶಸ್ತಿ
  ಈ ಬಾರಿಯ ಯುವಜನೋತ್ಸವದಲ್ಲಿ ತಿರುವನಂತಪುರದ ಯುನಿವರ್ಸಿಟಿ ಆಫ್ ಕೇರಳವು ಚಾಂಪಿಯನ್ ಆಗಿರುವುದು ತುಂಬಾ ಸಂತೋಷ ತಂದಿದೆ. ಕಳೆದ ಎರಡು ತಿಂಗಳಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ಅವಿರತ ಶ್ರಮದೊಂದಿಗೆ ತಯಾರಿ ನಡೆಸಿದ್ದರು. ಎಲ್ಲಾ ಸ್ಪರ್ಧೆಗಳು ಅಚ್ಚುಕಟ್ಟಾಗಿ ನಡೆದಿವೆ. ವಿವಿಯ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು. ಡಾ.ವಿಜಯಲಕ್ಷ್ಮೀ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯುನಿವರ್ಸಿಟಿ ಆಫ್ ಕೇರಳ, ತಿರುವನಂತಪುರಂ


 ವೇವ್ಸ್-2015 ಫಲಿತಾಂಶ ಮ್ಯೂಸಿಕ್: ಯುನಿವರ್ಸಿಟಿ ಆಫ್ ಕೇರಳ ತಿರುವನಂತಪುರಂ

ಡ್ಯಾನ್ಸ್ : ಮೈಸೂರು ವಿಶ್ವವಿದ್ಯಾಲಯ ಮೈಸೂರು ಸಾಹಿತ್ಯ
: ಅಮೃತ ವಿದ್ಯಾಪೀಠಂ ಕೊಯಂಬತ್ತೂರು ನಾಟಕ: ಅಮೃತ ವಿದ್ಯಾಪೀಠಂ ಕೊಯಂಬತ್ತೂರು
ಫೈನ್ ಅರ್ಟ್ಸ್: ಯೂನಿವರ್ಸಿಟಿ ಆಫ್ ಕೇರಳ ತಿರುವನಂತಪುರಂ

ಸಾಂಸ್ಕ್ರತಿಕ ಮೆರವಣಿಗೆ :

1. ಮೈಸೂರು ವಿಶ್ವವಿದ್ಯಾಲಯ

2. ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕ್ರತ ವಿವಿ ಕೇರಳ

3. ಮಂಗಳೂರು ವಿಶ್ವವಿದ್ಯಾಲಯ ಚಾಂಪಿಯನ್ : ಯುನಿವರ್ಸಿಟಿ ಆಫ್ ಕೇರಳ ತಿರುವನಂತಪುರಂ ರನ್ನರ್ ಆಪ್: ಮಹಾತ್ಮಾಗಾಂಧಿ ವಿಶ್ವವಿದ್ಯಾಲಯ ವಿ ಕೊಟ್ಟಾಯಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News