ಮುಂಬೈ : ವಿಜ್ಞಾನಿಗಳ ಸಾವಿಗೆ ಕಾರಣಗಳನ್ನು ತಿಳಿಸಲು ಸಮಯಾವಕಾಶ ಕೋರಿದ ಸರಕಾರ
Update: 2016-01-22 22:52 IST
ಮುಂಬೈ,ಜ.22: ಇಲ್ಲಿಯ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಕಳೆದ ಎರಡು ದಶಕಗಳಲ್ಲಿ ಸಂಭವಿಸಿರುವ ಪರಮಾಣು ವಿಜ್ಞಾನಿಗಳ ಸಾವುಗಳಿಗೆ ಕಾರಣಗಳ ಕುರಿತು ಹೆಚ್ಚುವರಿ ಮಾಹಿತಿಗಳನ್ನೊದಗಿಸಲು ಸಮಯಾವಕಾಶವನ್ನು ನೀಡುವಂತೆ ಅಣುಶಕ್ತಿ ಇಲಾಖೆ ಮತ್ತು ಮಹಾರಾಷ್ಟ್ರ ಸರಕಾರ ಶುಕ್ರವಾರ ಮುಂಬೈ ಉಚ್ಚ ನ್ಯಾಯಾಲಯವನ್ನು ಕೋರಿದವು.
ಅಕಾರಿಗಳು ಇದಕ್ಕೆ ಸಂಬಂಸಿದಂತೆ ಈ ಮೊದಲು ಪ್ರಮಾಣಪತ್ರವೊಂದನ್ನು ಸಲ್ಲಿಸಿದ್ದರು. ಕೋರಿಕೆಯನ್ನು ಪುರಸ್ಕರಿಸಿದ ನ್ಯಾ.ವಿ.ಎಂ.ಕಾನಡೆ ಮತ್ತು ನ್ಯಾ.ರೇವತಿ ಮೊಹಿತೆ-ಡೇರೆ ಅವರ ಪೀಠವು ಹೆಚ್ಚುವರಿ ಪ್ರಮಾಣಪತ್ರಗಳನ್ನು ಸಲ್ಲಿಸಲು ಎರಡು ವಾರಗಳ ಸಮಯಾವಕಾಶವನ್ನು ನೀಡಿತು. ಹಲವಾರು ಪರಮಾಣು ವಿಜ್ಞಾನಿಗಳ ಸಾವುಗಳ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಚೇತನ ಕೊಠಾರಿಯವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿದೆ.