×
Ad

ಸರಣಿ ಅತ್ಯಾಚಾರ: ಮಾಜಿ ಪೊಲೀಸ್‌ಗೆ 263 ವರ್ಷ ಶಿಕ್ಷೆ

Update: 2016-01-22 23:16 IST

ಲಾಸ್ ಏಂಜಲಿಸ್, ಜ. 22: ಕರ್ತವ್ಯದಲ್ಲಿದ್ದಾಗ ಆಫ್ರಿಕನ್-ಅಮೆರಿಕನ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಅವರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ ಆರೋಪ ಹೊತ್ತಿರುವ ಓಕ್ಲಹಾಮ ರಾಜ್ಯದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಗುರುವಾರ 263 ವರ್ಷಗಳ ಜೈಲು ಶಿಕ್ಷಿ ವಿಧಿಸಲಾಗಿದೆ.
ಡೇನಿಯಲ್ ಹಾಲ್ಟ್‌ಕ್ಲಾ ವಿರುದ್ಧ ದಾಖಲಾದ 36 ಪ್ರಕರಣಗಳ ಪೈಕಿ 18ರಲ್ಲಿ ಆತನ ವಿರುದ್ಧದ ಆರೋಪಗಳು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಾಬೀತಾಗಿದ್ದವು.
ಓಕ್ಲಹಾಮ ನಗರದ ಬಡವರು ವಾಸಿಸುವ ಪ್ರದೇಶಗಳ ಕಪ್ಪು ಮಹಿಳೆಯರನ್ನು ಡೇನಿಯಲ್ ಬೇಟೆಯಾಡುತ್ತಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News