×
Ad

100 ವರ್ಷಗಳ ಹಿಂದೆಯೇ ಸೆಲ್ಫೀಯಿತ್ತು!

Update: 2016-01-22 23:26 IST

ಲಂಡನ್, ಜ. 22: 21ನೆ ಶತಮಾನವಂತೂ ಸೆಲ್ಫೀ ಯುಗ. ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಸೆಲ್ಫೀ ಎಂಬ ಕಲ್ಪನೆ ಹುಚ್ಚು ಹಿಡಿಸಿದೆ. ಆದರೆ, ಈ ಕಲ್ಪನೆ ಹೊಸದೇನೂ ಅಲ್ಲ. 100 ವರ್ಷಗಳ ಹಿಂದೆಯೇ ಸೆಲ್ಫೀ ಹುಚ್ಚು ಇತ್ತು ಎನ್ನುವುದನ್ನು ತೋರಿಸುವ ಚಿತ್ರಗಳು ಬ್ರಿಟನ್‌ನ ಕಾರ್ನ್‌ವಾಲ್ ನಗರದ ಪೆಂಝಾನ್ಸ್‌ನಲ್ಲಿ ಪತ್ತೆಯಾಗಿದೆ.
ಪ್ರವಾಸಿಗಳು ಮತ್ತು ಸ್ಥಳೀಯರು ಭಾವಚಿತ್ರಗಳಿಗೆ ಪೋಸ್ ನೀಡುವ 1915ರ ಚಿತ್ರಗಳು ಈ ನಗರದಲ್ಲಿ ಪತ್ತೆಯಾಗಿವೆ. ಶ್ರೀಮಂತ ಮಹಿಳೆಯರು ಮತ್ತು ಸಿಗರೆಟ್ ಸೇದುವ ಹುಡುಗರು ಈ ಚಿತ್ರಗಳಲ್ಲಿ ಪೋಸ್ ನೀಡುತ್ತಾರೆ.
ಈ ಆಕರ್ಷಕ ಚಿತ್ರಗಳನ್ನು ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಸಿಮನ್ಸ್ ಪತ್ತೆ ಹಚ್ಚಿದ್ದಾರೆ ಎಂದು ‘ದ ಸನ್’ ವರದಿ ಮಾಡಿದೆ.

ಈ ಚಿತ್ರಗಳ ನಿಖರ ದಿನಾಂಕದ ಬಗ್ಗೆ ಜಾನ್‌ಗೆ ಖಚಿತ ಮಾಹಿತಿಯಿಲ್ಲ. ಆದರೆ, ಪೆಂಝಾನ್ಸ್‌ನಲ್ಲಿರುವ ಅಂಗಡಿಯೊಂದರ ಜಾಹೀರಾತು ಇರುವ 1915ರ ಸ್ಥಳೀಯ ಪತ್ರಿಕೆಯೊಂದರ ಪ್ರತಿಯೂ ಈ ಚಿತ್ರಗಳೊಂದಿಗೆ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News