ಬಸ್ ಮೇಲೆ ಬಿದ್ದ ವಿದ್ಯುತ್ ಕಂಬ: ತಪ್ಪಿದ ಭಾರೀ ಅನಾಹುತ
Update: 2016-01-22 23:40 IST
ಸುಬ್ರಹ್ಮಣ್ಯ, ಜ.22: ಹೈ-ಟೆನ್ಶನ್ ತಂತಿ ಬಸ್ಸಿನ ಮೇಲ್ಛಾವಣಿಗೆ ಸಿಲುಕಿ ತಂತಿಯ ಸೆಳೆತಕ್ಕೆ ವಿದ್ಯುತ್ ಕಂಬ ಬಸ್ಸಿನ ಮೇಲೆ ಮುರಿದು ಬಿದ್ದ ಘಟನೆ ಶುಕ್ರವಾರ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಮಧ್ಯಾಹ್ನ ವೇಳೆ ಖಾಸಗಿ ಬಸ್ಸೊಂದು ಕಾಶಿಕಟ್ಟೆ ವೃತ್ತದ ಬಳಿ ಬೈಪಾಸ್ ರಸ್ತೆಯ ಮೂಲಕ ನಿಲ್ದಾಣಕ್ಕೆ ತೆರಳುವ ವೇಳೆ ರಸ್ತೆಯ ಬಳಿ ಹಾದುಹೋಗಿರುವ ಹೈ-ಟೆನ್ಶನ್ ತಂತಿಗೆ ತಗಲಿ ವಿದ್ಯುತ್ ಕಂಬ ಮುರಿದು ಬಸ್ಸಿನ ಮೇಲೆ ಬಿದ್ದಿದೆ. ಈ ಸಂದರ್ಭ ಬಸ್ಸಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಕೇಬಲ್ ತಂತಿಯಾದುದರಿಂದ ಸಂಭವಿಸುವ ಭಾರೀ ಅನಾಹುತ ತಪ್ಪಿದೆ.