×
Ad

ಸಚಿವ ಬಂಡಾರು ವಿರುದ್ಧ ಕಾನೂನು ಕ್ರಮಕ್ಕೆ ದಸಂಸ ಆಗ್ರಹ

Update: 2016-01-22 23:42 IST

ಮಂಗಳೂರು.ಜ.22:ದಲಿತ ಸಂಶೋ ಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣರಾದ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ವಿವಿಯ ಉಪಕುಲಪತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದೆ.
  ವಿಶ್ವವಿದ್ಯಾನಿಲಯಗಳಲ್ಲಿ ಎಬಿ ವಿಪಿಯ ನೇತೃತ್ವದಲ್ಲಿ ಕೋಮು ವಾದಿ ಚಟುವಟಿಕೆ ನಡೆಸುತ್ತಿ ರುವುದಕ್ಕೆ ಹೈದರಾಬಾದ್ ಪ್ರಕರಣ ಒಂದು ಉದಾಹರಣೆಯಾಗಿದೆ. ರೋಹಿತ್ ವೇಮುಲಾ ಬರೆದಿರುವ ಡೆತ್‌ನೋಟ್ ಮನುವಾದಿಗಳ ಜಾತಿವಾದದ ವ್ಯವಸ್ಥೆಯ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಲಿ ಎನ್ನುವುದರ ಪ್ರತೀಕವಾಗಿದೆ ಎಂದು ದಸಂಸ (ಕೃಷ್ಣಪ್ಪ ಸ್ಥಾಪಿತ)ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ತಿಳಿಸಿದ್ದಾರೆ.
ಆರ್ಯರು ಭಾರತಕ್ಕೆ ಬಂದ ಬಳಿಕ ದಲಿತರ ಮೇಲೆ ಹೇರಲಾದ ಮನುವಾದಿ ವ್ಯವಸ್ಥೆ ಅವರು ಶೂದ್ರರಿಗೆ ಶಿಕ್ಷಣದ ಹಕ್ಕನ್ನು ನೀಡಬಾರದು ಎಂದು ಪ್ರತಿಪಾದಿಸಿದೆ ಮತ್ತು ಶಿಕ್ಷಣ ಪಡೆದರೆ ಅವರಿಗೆ ಶಿಕ್ಷೆಯನ್ನು ನೀಡಬೇಕೆಂದು ಪ್ರತಿಪಾದಿಸುತ್ತಾ ಬಂದಿದೆ. ಅದೇ ವ್ಯವಸ್ಥೆ ಇಂದು ವಿಶ್ವವಿದ್ಯಾನಿಲಯದಲ್ಲಿ ಬಲಗೊಂಡು ರೋಹಿತ್ ವೇಮುಲಾನನ್ನು ಆತ್ಮಹತ್ಯೆ ಮಾಡುವಂತೆ ಮಾಡಿದೆ. ಇದರಲ್ಲಿ ಕೇಂದ್ರ ಸಚಿವರ ಕುಮ್ಮಕ್ಕು ಇದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಉನ್ನತ ತನಿಖೆ ನಡೆಯಬೇಕಾಗಿದೆ ಎಂದು ದೇವದಾಸ್ ಆಗ್ರಹಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಡಿಎಸ್‌ಎಸ್ ಮುಖಂಡರಾದ ರಘು ಎಕ್ಕಾರು, ಕೃಷ್ಣಾನಂದ, ಶಿವಪ್ಪ ಅಟ್ಟೊಳೆ, ಭಾಸ್ಕರ, ಸಮುದಾಯ ಸಂಘಟನೆಯ ಜಿಲ್ಲಾ ಸಂಚಾಲಕ ವಾಸುದೇವ ಉಚ್ಚಿಲ್, ಡಿವೈಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮೊದಲಾದವರು ಉಪ ಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News